ಬಂದರ್ : ಮದ್ರಸ ತರಗತಿ ಆನ್‌ಲೈನ್‌ನಲ್ಲಿ ಆರಂಭಿಸಲು ಸೂಚನೆ
Update: 2021-05-31 22:13 IST
ಮಂಗಳೂರು, ಮೇ 31: ನಗರದ ಬಂದರ್‌ನ ಅಲ್ಮದ್ರಸತುಲ್ ಅಝ್ಹರಿಯ ಅಸೋಶಿಯೇಶನ್ ಅಧೀನದಲ್ಲಿರುವ ಮದ್ರಸಗಳ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದ ಕುರಿತು ಸೋಮವಾರ ಉಪಾಧ್ಯಕ್ಷ ಕೆ. ಅಶ್ರಫ್‌ರ ಅಧ್ಯಕ್ಷತೆಯಲ್ಲಿ ಝೂಮ್ ಸಭೆ ನಡೆಯಿತು.
ಕೋವಿಡ್-19 ಪ್ರಯುಕ್ತ ಸರಕಾರದ ಮುಂದಿನ ಆದೇಶದವರೆಗೆ ಮದ್ರಸ ತೆರೆಯಲು ಅಸಾಧ್ಯವಾದ ಕಾರಣ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ನಿರ್ದೇಶನದಂತೆ ಜೂ.2ರಂದು ಆನ್‌ಲೈನ್ ಮೂಲಕ ಮದ್ರಸ ತರಗತಿ ಪ್ರಾರಂಭಿಸಲು ತೀರ್ಮಾನಿಸಲಾಯಿತು.
ಅಲ್ ಮದ್ರಸತುಲ್ ಅಝ್ಹರಿಯ ಅಸೋಶಿಯೇಶನ್‌ನ ಮಾಜಿ ಅಧ್ಯಕ್ಷ ಇಬ್ರಾಹಿಂ ಬಾವ ಹಾಜಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಫಝಲ್ರ ಪತ್ನಿಯ ಪಾರತ್ರಿಕ ಜೀವನದ ಉನ್ನತಿಗಾಗಿ ಪ್ರಾರ್ಥಿಸಲಾಯಿತು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಮತ್ತಿತರರು ಉಪಸ್ಥಿತರಿದ್ಧರು.