ಚೀನಾ‌ದ ಕುಟುಂಬ ಯೋಜನೆಯಲ್ಲಿ ಮಾರ್ಪಾಡು: ಇನ್ನು 3 ಮಕ್ಕಳನ್ನು ಹೊಂದಲು ಅವಕಾಶ

Update: 2021-05-31 17:15 GMT

ಬೀಜಿಂಗ್ (ಚೀನಾ), ಮೇ 31: ಚೀನಾವು ತನ್ನ ಕುಟುಂಬ ಯೋಜನೆ ನೀತಿಯಲ್ಲಿ ಮಾರ್ಪಾಡುಗಳನ್ನು ಮಾಡಿದ್ದು, ದಂಪತಿಗಳು ಗರಿಷ್ಠ ಮೂರು ಮಕ್ಕಳನ್ನು ಪಡೆಯಬಹುದಾಗಿದೆ ಎಂದು ಸರಕಾರಿ ಮಾಧ್ಯಮ ಕ್ಸಿನುವಾ ಸೋಮವಾರ ವರದಿ ಮಾಡಿದೆ.

ದೇಶದ ಜನಸಂಖ್ಯೆಯು ವೇಗವಾಗಿ ವೃದ್ಧಾಪ್ಯದತ್ತ ಚಲಿಸುತ್ತಿರುವುದು ಜನಗಣತಿಯಲ್ಲಿ ಬೆಳಕಿಗೆ ಬಂದ ಬಳಿಕ ಅದು ಈ ಕ್ರಮವನ್ನು ತೆಗೆದುಕೊಂಡಿದೆ.

ಚೀನಾದಲ್ಲಿ ಸುಮಾರು 40 ವರ್ಷಗಳ ಕಾಲ ‘‘ಒಂದೇ ಮಗು’ ನೀತಿ ಜಾರಿಯಲ್ಲಿತ್ತು. ಕೆಲಸ ಮಾಡುವವರಿಗೆ ವಯಸ್ಸಾಗುತ್ತಿರುವುದನ್ನು ಪರಿಗಣಿಸಿ 2016ರಲ್ಲಿ ಆ ನಿಯಮಕ್ಕೆ ತಿದ್ದುಪಡಿ ತಂದು ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News