ಜೂ.1ರಂದು ದ.ಕ. ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆ ಇಲ್ಲ : ಡಾ. ರಾಜೇಶ್
Update: 2021-05-31 23:17 IST
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ಜೂ.1ರಂದು ಸಾರ್ವಜನಿಕರಿಗೆ ಲಸಿಕೆ ವಿತರಣೆಯಿಲ್ಲ. ಆದರೆ 18ರಿಂದ 44 ವಯಸ್ಸಿನೊಳಗೆ ಆದ್ಯತಾ ಪಟ್ಟಿಯಲ್ಲಿರುವವರಿಗೆ ಲಸಿಕೆ ವಿತರಣೆ ನಡೆಯಲಿದೆ ಎಂದು ದ.ಕ ಜಿಲ್ಲಾ ಲಸಿಕಾ ನಿರ್ವಹಣಾ ಮೇಲ್ವಿಚಾರಕ ಡಾ. ರಾಜೇಶ್ ತಿಳಿಸಿದ್ದಾರೆ.
ವೆನ್ಲಾಕ್ ಸೇರಿದಂತೆ ಯಾವುದೇ ಲಸಿಕಾ ಕೇಂದ್ರಗಳಲ್ಲಿ ಕೋವಿಶೀಲ್ಡ್ ಲಸಿಕೆ ಸಾರ್ವಜನಿಕರಿಗೆ ನೀಡಲಾಗುವುದಿಲ್ಲ. ವಿಕಲಚೇತನರು, ವಕೀಲರು, ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ ಇತರ ಆದ್ಯತಾ ವಲಯದವರಿಗೆ ಅವರ ಕೆಲಸದ ಸ್ಥಳಗಳಲ್ಲಿ ಲಸಿಕೆ ನೀಡುವ ಕಾರ್ಯ ನಡೆಯಲಿದೆ. ಲಭ್ಯ ಇರುವ ಕೋವ್ಯಾಕ್ಸಿನ್ ಲಸಿಕೆಗಳನ್ನು ದ್ವಿತೀಯ ಡೋಸ್ ಗೆ ಸಂದೇಶ ಅಥವಾ ಸಂಬಂಧ ಪಟ್ಟ ಲಸಿಕಾ ಕೇಂದ್ರಗಳಿಂದ ಕರೆ ಬಂದಿರುವ ಫಲಾನುಭವಿಗಳಿಗೆ ಮಾತ್ರವೇ ಲಸಿಕೆ ನೀಡಲಾಗುತ್ತದೆ ಎಂದು ಡಾ. ರಾಜೇಶ್ ತಿಳಿಸಿದ್ದಾರೆ.