ಲಾಕ್‍ಡೌನ್ ; ಪ್ರವಾಸಿ ತಾಣವನ್ನೇ ನಂಬಿ ಕುದುರೆ ಸವಾರಿ ಮಾಡುವ ನಮಗೆ ಜೀವನ ಕಷ್ಟವಾಗಿದೆ: ಕಿಶೋರ್
ಪಡುಬಿದ್ರಿ: ಲಾಕ್‍ಡೌನ್‍ನಿಂದ ಜನ ಸಾಮಾನ್ಯರು ವಿವಿಧ ರೀತಿಯಲ್ಲಿ ಸಮಸ್ಯೆ ಅನುಭವಿಸುತಿದ್ದಾರೆ. ಅದರಲ್ಲೂ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದ ಬಳಿಕ ಪ್ರವಾಸಿ ತಾಣವನ್ನೇ ನಂಬಿ ಅಲ್ಲಿ ಕುದುರೆ ಹಾಗೂ ಒಂಟೆ ಸವಾರಿ ನಡೆಸುತಿದ್ದ ಕುಟುಂಬಕ್ಕೆ ಜೀವನ ಸಾಗಿಸುವುದೇ ಕಷ್ಟವಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಪಣಂಬೂರು ಬೀಚ್‍ನಲ್ಲಿ ದಿನನತ್ಯ ಪ್ರವಾಸಿಗರನ್ನು ಕುದುರೆ ಸವಾರಿ ನಡೆಸಿ ಜೀವನ ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಕಿಶೋರ್ ಹಾಗೂ ಸಾಗರ್ ಕುಟುಂಬ ಇದೀಗ ತಮ್ಮ ಜೀವನ ನಡೆಸುತ್ತಿರುವುದೇ ಕಷ್ಟವಾಗುತಿದ್ದೆ ಎನ್ನುತ್ತಾರೆ.
ಪಣಂಬೂರು ಬೀಚ್‍ನಲ್ಲಿ ಲಾಕ್‍ಡೌನ್‍ನಿಂದ ಜನರು ಬಾರದ ಹಿನ್ನಲೆಯಲ್ಲಿ ಮಲ್ಪೆಯಲ್ಲಿರುವ ತಮ್ಮ ಕುಟುಂಬದವರಿಗಾಗಿ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳಿನಲ್ಲಿ ಒಂಟೆಯೊಂದಿಗೆ ಕಾಲ್ನಡಿಗೆಯಲ್ಲಿ ಸಾಗುತಿದ್ದರು. ಲಾಕ್ಡೌನ್ ನಿಂದಾಗಿ ಬಹಳಷ್ಟು ಸಮಸ್ಯೆಗೊಳಗಾಗಿದೆ. ಸುಮಾರು ರೂ. 500 ರಷ್ಟು ಕುದುರೆಗಳಿಗೆ ದಿನ ಖರ್ಚು ತಗುಲುತ್ತಿವೆ. ಸರ್ಕಾರದಿಂದ ನಮಗೆ ಏನೂ ಸಹಾಯ ಸಿಗುತಿಲ್ಲ. ಇದರಿಂದಾಗಿ ಕುದುರೆಯ ಆಹಾರಕ್ಕೂ ಪರದಾಡುವಂತಾಗಿದೆ. ಕುಟುಂಬ ಸಾಕುವುದು ಮಾತ್ರವಲ್ಲ ಅವುಗಳನ್ನು ಸಾಕುವುದಕ್ಕೂ ಕಷ್ಟವಾಗಿದೆ. ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಪ್ರವಾಸಿಗರನ್ನೆ ನಂಬಿ ಬದುಕು ಕಂಡಿದ್ದೆ. ಸಮುದ್ರ ತೀರದಲ್ಲಿ ಪ್ರವಾಸಿಗಳಿಲ್ಲದೆ ಆಹಾರಕ್ಕೂ ಪರದಾಡುವಂತಾಗಿದ್ದು ರಸ್ತೆಯ ಪಕ್ಕದಲ್ಲಿದ್ದ ಸೊಪ್ಪುಗಳನ್ನು ತಿನಿಸಿ ತೃಪ್ತಿ ಪಡಬೇಕಾಗಿದೆ ಎಂದು ಕಿಶೋರ್ ತನ್ನ ಅಳಲನ್ನು ತೋಡಿಕೊಂಡರು.
ಕುದುರೆ ಸವಾರಿ: ಪಡುಬಿದ್ರಿ ಕಾಡಿಪಟ್ಣದಲ್ಲಿ ನೆಲೆಸಿರುವ ಮೂಲತಃ ರಾಜಸ್ತಾನ ಜಾಲೋರ್ ಜಿಲ್ಲೆ ದೇಲ್ತಾದ ರಾಜೂಸಿಂಗ್ ತಂದೆಯಿಂದ ಬಳುವಳಿಯಾಗಿ ಬಂದಿದ್ದ ಕುದುರೆ ವ್ಯಾಪಾರವನ್ನು ನಡೆಸುತಿದ್ದಾರೆ. ಎಳವೆಯಲ್ಲಿಯೇ ಕುದುರೆಗಳ ತಳಿ, ಸಾಕಣಿಕೆ ಸಹಿತ ಅಮೂಲಾಗ್ರಹ ವಿಷಯಗಳನ್ನು ತಿಳಿದುಕೊಂಡಿದ್ದ ರಾಥೋಡ್ ಮೊದಲು ಮೂಲ್ಕಿಯಲ್ಲಿಯೇ ಇದ್ದು ವ್ಯಾಪಾರ ನಡೆಸುತ್ತಿ ದ್ದರು. ಪಡುಬಿದ್ರಿ ಸಮುದ್ರ ತೀರದಲ್ಲಿ ಕುದುರೆ ಸವಾರಿಗೆ ಇರುವ ಅವಕಾಶವನ್ನು ಬಳಸಿಕೊಳ್ಳುವ ದೃಷ್ಟಿಯಿಂದ ಜಯ ಸುವರ್ಣರು ಕಾಡಿಪಟ್ಣದ ಅವರ ಸುಮಾರು 2 ಎಕರೆ ಜಮೀನಿನಲ್ಲಿ ರಾತೋಡ್‍ಗೆ ಆಶ್ರಯ ಕಲ್ಪಿಸಿದರು.
ಕಡಲ ತೀರದಲ್ಲಿ ಪ್ರವಾಸಿಗರಿಗೆ ಕುದುರೆ ಸವಾರಿ ಮಾಡಿಸುತ್ತಿರುವ, ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕುದುರೆ ಚಾಕಚಕ್ಯತೆ ಮೆರೆದು ರಾಜೂಸಿಂಗ್ ಆದಾಯ ಗಳಿಸುತಿದ್ದರು.
ಪ್ರಸ್ತುತ ಪಡುಬಿದ್ರಿಯಲ್ಲಿ 32 ವರ್ಷದ ಮಾರ್ವಾಡಿ ತಳಿಯ ಹಿರಿಯ ಕುದುರೆ ಸೇರಿ 7 ಹಾಗೂ ರಾಜಸ್ತಾನದಲ್ಲಿ 9 ಕುದುರೆಗಳಿವೆ. ಪಡುಬಿದ್ರಿಯಲ್ಲಿನ 2 ಕುದುರೆ ಮುಂಬೈ ಮತ್ತು ಕೇರಳಕ್ಕೆ ಹಾಗೂ ರಾಜಸ್ತಾನದ ತಮಿಳುನಾಡು 6 ಮಾರಾಟವಾಗಿದೆ. ಕುದುರೆಯೊಂದಕ್ಕೆ ದಿನವಹೀ ಸುಮಾರು 600 ರೂಪಾಯಿ ವೆಚ್ಚವಾಗುತ್ತಿದ್ದು, ಲಾಕ್‍ಡೌನ್‍ನಿಂದ ಮಾರಾಟ ಹಾಗೂ ಖರ್ಚುವೆಚ್ಚಕ್ಕೂ ತೊಂದರೆಯಾಗಿದೆ. ಕಿರು ಚಿತ್ರ ಸಹಿತ ಚಲನ ಚಿತ್ರಗಳಲ್ಲಿ ಚಿತ್ರೀಕರಣಕ್ಕೂ ಕುದುರೆಗಳಿಗೆ ಬೇಡಿಕೆ ಬಂದಿವೆ. ಎರಡು ವರ್ಷಗಳಲ್ಲಿ ಕರೋನ ಪರಿಣಾಮ ಸಮುದ್ರ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ, ಮದುವೆ ಇನ್ನಿತರ ಸಮಾರಂಭಗಳಿಗೆ ಅವಕಾಶವಿಲ್ಲದೆ ಕುದುರೆ ಸವಾರಿಗೆ ಬಾರೀ ಹೊಡೆತ ಬಿದ್ದಿದೆ ಎನ್ನುತ್ತಾರೆ ಕುದುರೆ ವ್ಯಾಪಾರಿ ರಾಜೂಸಿಂಗ್ ರಾಥೋಡ್.