×
Ad

ಸಿಎಫ್‌ಐಯಿಂದ ಸಾಮೂಹಿಕ ಮೇಲಿಂಗ್ ಅಭಿಯಾನ

Update: 2021-06-01 17:58 IST

ಉಡುಪಿ, ಜೂ.1: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ‘ಬಿಜೆಪಿ ಹವಾಲಾ ಕಾಣಿಸಿಕೊಂಡಾಗ ಇಡಿ ಕಣ್ಮರೆಯಾ ಯಿತು’ ಎಂಬ ಸಾಮೂಹಿಕ ಮೇಲಿಂಗ್ ಅಭಿಯಾನವನ್ನು ಇಂದು ಜಿಲ್ಲೆ ಯಾದ್ಯಂತ ನಡೆಸಲಾಯಿತು.

ಕೇರಳದ ಬಿಜೆಪಿ-ಆರ್‌ಎಸ್‌ಎಸ್ ರಾಜ್ಯ ನಾಯಕರು 3.5ಕೋಟಿ ಹವಾಲಾ ದಲ್ಲಿ ಭಾಗಿಯಾಗಿದ್ದು, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ವಿಧ್ವಂಸಕ ಕೃತ್ಯ ನಡೆಸಲು ಬಳಸ ಲಾಗಿತ್ತು. ಇದರ ಬಗ್ಗೆ ಈಡಿಯು ತನಿಖೆ ನಡೆಸಬೇಕು. ಇಂತಹ ಗಂಭೀರ ಪ್ರಕರಣಗಳನ್ನು ಈಡಿಯು ಮರೆಮಾಚುತ್ತಿದೆ ಎಂದು ಸಿಎಫ್‌ಐ ದೂರಿದೆ.

ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ಈ ಮೇಲ್ ಮುಖಾಂತರ ಪತ್ರ ರವಾನಿಸಿ ಒತ್ತಾಯಿಸಲಾಯಿತು. ಜಿಲ್ಲೆಯಿಂದ ಸುಮಾರು ನೂರಕ್ಕೂ ಅಧಿಕ ಇಮೇಲ್ಗಳನ್ನು ವಿದ್ಯಾರ್ಥಿಗಳು, ನಾಗರಿಕರು ಕಳುಹಿಸಿದ್ದಾರೆ. ಸಿಎಫ್‌ಐ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಮ್, ಕಾರ್ಯದರ್ಶಿ ಮಸೂದ್ ಮನ್ನಾ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಸಹದ್ ಬಸ್ರೂರ್, ಮುಜಾಹಿದ್, ಸಿಂಹಾನ, ಶಾಹಿಘ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News