×
Ad

ಹೆಬ್ರಿ-ಪರ್ಕಳ-ಮಲ್ಪೆ ರಾ.ಹೆ. ಕಾಮಗಾರಿಗೆ 350 ಕೋಟಿ ರೂ. ಬಿಡುಗಡೆ : ಸಂಸದೆ ಶೋಭಾ

Update: 2021-06-01 17:59 IST

ಉಡುಪಿ, ಜೂ.1: ಹೆಬ್ರಿಯಿಂದ ಪರ್ಕಳವರೆಗೆ ಮತ್ತು ಕರಾವಳಿ ಜಂಕ್ಷನ್ ನಿಂದ ಮಲ್ಪೆಯವರೆಗಿನ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಅಗಲೀಕರಣಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ನೀಡಿದೆ.

ಒಟ್ಟು 29 ಕಿಲೋಮೀಟರ್ ಉದ್ದದ ದ್ವಿಪಥ/ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ 350 ಕೋಟಿ ರೂ.(ಭೂಸ್ವಾಧೀನ ಸಹಿತ) ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ ರಾಷ್ಟ್ರೀಯ ಹೆದ್ದಾರಿ 169ಎ ಹೆಬ್ರಿ ಸೀತಾನದಿ ಬಳಿಯಲ್ಲಿ ರಿಟೈನಿಂಗ್‌ವಾಲ್ ನಿರ್ಮಾಣ, ರಸ್ತೆ ಎತ್ತರಿಸುವುದು ಮತ್ತು ಶೃಂಗೇರಿ ಕೆರೆಕಟ್ಟೆ ಸಮೀಪದ ನೆಮ್ಮಾರು ಬಳಿ ರಸ್ತೆ ಎತ್ತರಿಸುವುದು, ರಿಟೈನಿಂಗ್ ವಾಲ್ ನಿರ್ಮಾಣ ಕಾಮಗಾರಿಗೆ ಅಂದಾಜು ಮೊತ್ತ 19ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News