ಫಲಾನುಭವಿಗಳಿಗೆ ದೋಣಿ, ಬಲೆ, ಇಂಜಿನ್ ವಿತರಣೆ
Update: 2021-06-01 18:00 IST
ಉಡುಪಿ, ಜೂ.1: ಮೀನುಗಾರಿಕೆ ಇಲಾಖೆಯಿಂದ 2020-21ನೇ ಸಾಲಿನ ಪರಿಶಿಷ್ಟ ಜಾತಿ/ಪಂಗಡ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಎಫ್.ಆರ್.ಪಿ. ದೋಣಿ ಸರಬರಾಜು ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯಡಿಯಲ್ಲಿ ಉಡುಪಿ ಕ್ಷೇತ್ರದ ಆರು ಮಂದಿ ಫಲಾನುಭವಿಗಳಿಗೆ ಮಂಜೂರಾದ ದೋಣಿ, ಬಲೆ, ಇಂಜಿನ್ ಗಳನ್ನು ಇಂದು ವಿತರಿಸಲಾಯಿತು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಇವುಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಡುಪಿ ನಗರಸಭೆ ನಾಮನಿರ್ದೇಶಿತ ಸದಸ್ಯ ವಿಜಯ್ ಕುಂದರ್, ಮೀನುಗಾರಿಕಾ ಹಿರಿಯ ಉಪನಿರ್ದೇಶಕ ಗಣೇಶ್, ಉಪನಿರ್ದೇಶಕ ಶಿವಕುಮಾರ್ ಜಿ.ಎಂ, ಸಹಾಯಕ ನಿರ್ದೇಶಕರ ದಿವಾಕರ ಖಾರ್ವಿ, ಇಲಾಖಾ ಸಿಬ್ಬಂದಿ ರವಿ ಎಚ್. ಉಪಸ್ಥಿತರಿದ್ದರು.