×
Ad

ಸವಿತಾ ಸಮಾಜ ಸಹಕಾರಿಯಿಂದ ಕೋವಿಡ್ ಸಹಾಯಧನ, ಆಹಾರ ಸಾಮಗ್ರಿ ವಿತರಣೆ

Update: 2021-06-01 18:02 IST

 ಉಡುಪಿ, ಜೂ.1: ಉಡುಪಿ ಸವಿತಾ ಸಮಾಜ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ವತಿಯಿಂದ ಉಡುಪಿ ಜಿಲ್ಲೆಯಾದ್ಯಂತ ನೆಲೆಸಿರುವ ಕ್ಷೌರಿಕ ಹಾಗೂ ಕ್ಷೌರಿಕೇತರ ಸವಿತಾ ಸಮಾಜದ 650ಕ್ಕೂ ಹೆಚ್ಚು ಅರ್ಹ ಸದಸ್ಯರಿಗೆ ಸುಮಾರು 6 ಲಕ್ಷ ವೆಚ್ಚದಲ್ಲಿ ಆಹಾರ ಸಾಮಾಗ್ರಿ ಹಾಗೂ ಸೆಲೂನು ಸಾಮಾಗ್ರಿ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಸವಿತಾ ಸಮಾಜದ ಸದಸ್ಯರಿಗೆ, ಕೊರೋನಾ ಪೀಡಿತರಾದ ಅರ್ಹ ಸದಸ್ಯರಿಗೆ 5000ರೂ.ವರೆಗೆ ಸಹಾಯಧನ ಘೋಷಿಸಿದೆ. ಸದಸ್ಯರಿಗೆ ಸೆಲೂನು ಸಾಮಾಗ್ರಿ ಖರೀದಿಸಲು 10 ಸಾವಿರ ರೂ.ವರೆಗೆ ಆರು ತಿಂಗಳು ಬಡ್ಡಿರಹಿತ ಸಾಲ ಸೌಲಭ್ಯ ವನ್ನು ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ಸದಸ್ಯರ ಸಾಲದ ಕಂತನ್ನು ಜೂನ್ ತಿಂಗಳ ಅಂತ್ಯದವರೆಗೆ ಮುಂದೂಡಲಾಗಿದೆ ಎಂದು ಸಹಕಾರಿ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ತಿಳಿಸಿದ್ದಾರೆ.

ಆಹಾರ ಸಾಮಗ್ರಿ ಮತ್ತು ಸೆಲೂನ್ ಸಾಮಗ್ರಿಗಳ ವಿತರಣೆ ಜೂ.4ರಿಂದ ಸಹಕಾರಿಯ ಪ್ರಧಾನ ಕಚೇರಿ ಉಡುಪಿ ಹಾಗೂ ಕಾರ್ಕಳ ಕುಂದಾಪುರ ಶಾಖೆ ಯಲ್ಲಿ ನಡೆಯಲಿದೆ. ಕೋರೋಣ ದೃಢೀಕೃತಗೊಂಡ ನಿರಂತರ ವ್ಯವಹರಿಸುವ ಸವಿತಾ ಸಮಾಜದ ಸದಸ್ಯರು ಅಥವಾ ಕುಟುಂಬದವರು ಸಹಾಯಧನಕ್ಕಾಗಿ ಉಡುಪಿ ಕಾರ್ಕಳ ಕುಂದಾಪುರ ಕಚೇರಿಯಲ್ಲಿ ಜೂ.30ರ ಒಳಗೆ ಅರ್ಜಿ ಸಲ್ಲಿಸಬಹುದೆಂದು ಸಹಕಾರಿಯ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಮಾಲತಿ ಅಶೋಕ್ ಭಂಡಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News