×
Ad

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಿಂದ ಕಿಟ್ ವಿತರಣೆ

Update: 2021-06-01 22:17 IST

ಮಂಗಳೂರು, ಜೂ.1: ಲಾಕ್‌ಡೌನ್‌ನಿಂದ ಉಂಟಾದ ಸಮಸ್ಯೆಯನ್ನು ನೀಗಿಸಲು ವಾಮಂಜೂರಿನಲ್ಲಿರುವ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ತನ್ನ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಸುತ್ತಮುತ್ತಲ ಪ್ರದೇಶದ ಅರ್ಹ ಕುಟುಂಬಗಳಿಗೆ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಿಸಲಾಯಿತು.

ಅಲ್ಲದೆ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ಕೃಷಿ ಕೆಲಸಗಾರರಿಗೆ ಕಿಟ್‌ಗಳನ್ನು ವಿತರಿಸಿತು. ಕಾಲೇಜು ಆಡಳಿತವು ತನ್ನ ಶೈಕ್ಷಣಿಕ ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದು, ಅದರಂತೆ ಈ ಗ್ರಾಮಗಳಿಗೆ ಸಮಯೋಚಿತ ಸಹಾಯವನ್ನು ಸಕ್ರಿಯವಾಗಿ ನೀಡುತ್ತಾ ಬಂದಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News