ಬಾಂಗ್ಲಾ: 70ಕ್ಕೂ ಅಧಿಕ ಹುಲಿಗಳ ಹಂತಕ, ಕಾಡುಗಳ್ಳ ಟೈಗರ್ ಹಬೀಬ್ ಬಂಧನ

Update: 2021-06-01 16:59 GMT
photo twitter :(@diariohoynet)
 

 ಢಾಕಾ,ಜೂ.1: 70ಕ್ಕೂ ಅಧಿಕ ರಾಯಲ್ ಬೆಂಗಾಲ್ ಹುಲಿಗಳನ್ನು ಹತ್ಯೆಗೈದಿದ್ದಾನೆಂದು ಶಂಕಿಸಲಾಗಿರುವ ಕುಖ್ಯಾತ ಕಾಡುಗಳ್ಳ ‘ ಹಬೀಬ್ ತಾಲೂಕ್ದಾರ್’ನನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದಾರೆ.

 ‘ಟೈಗರ್ ಹಬೀಬ್’ ಎಂದೇ ಕುಖ್ಯಾತನಾಗಿರುವ ಹಬೀಬ್ ತಾಲೂಕ್ದಾರ್ ಅರಣ್ಯ ಪ್ರದೇಶದ ಬಳಿಯೇ ವಾಸವಾಗಿದ್ದು, ಹುಲಿಗಳ ಬೇಟೆಯಾಡುತ್ತಿದ್ದನು ಹಾಗೂ ಅಧಿಕಾರಿಗಳು ದಾಳಿ ನಡೆಸಿದಾಗಲೆಲ್ಲಾ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ. ಆದರೆ ಇತ್ತೀಚೆಗೆ ತಮಗೆ ದೊರೆತ ಸುಳಿವಿನ ಆಧಾರದಲ್ಲಿ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಿಸಿ ಆತನನ್ನು ಬಂಧಿಸುವಲ್ಲಿ ಸಫಲರಾದರೆಂದು ಸ್ಥಳೀಯ ಪೊಲೀಸ್ ವರಿಷ್ಠ ಸಯೀದುರಹ್ಮಾನ್ ತಿಳಿಸಿದ್ದಾರೆ.
    

ಭಾರತ ಹಾಗೂ ಬಾಂಗ್ಲಾದೇಶಗಳ ನಡುವೆ ಹರಡಿರುವ ವಿಶಾಲವಾದ ಕಾಂಡ್ಲಾ ಕಾಡಾದ ಸುಂದರ ಬನಗಳಲ್ಲಿ ಹಬೀಬ್ ಬೇಟೆಯಾಡುತ್ತಿದ್ದ. ಈ ಪ್ರದೇಶವು ವಿಶಿಷ್ಟವಾದ ರಾಯಲ್ ಬೆಂಗಾಲ್ ಹುಲಿಗಳ ಆವಾಸತಾಣವಾಗಿದೆ. ಹಬೀಬ್ ನಿಂದ ಹುಲಿಗಳ ಹಲ್ಲು,ಉಗುರು, ಎಲುಬು ಮಾತ್ರವಲ್ಲದೆ ಮಾಂಸವನ್ನು ಕೂಡಾ ಕಾಳ ಸಂತೆ ವರ್ತಕರಿಗೆ ಮಾರಾಟ ಮಾಡುತ್ತಿದ್ದ. ಅವರು ಅದನ್ನು ಚೀನಾ ಮತ್ತಿತರ ದೇಶಗಳಲ್ಲಿ ಮಾರುತ್ತಿದ್ದರೆಂದು ಸಯೀದುರಹ್ಮಾನ್ ತಿಳಿಸಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News