×
Ad

ಕೋವಿಡ್-19 ಬಾಧಿತ ಭಿನ್ನ ಸಾಮರ್ಥ್ಯದವರಿಗೆ ಭಾರತ-ಅಮೆರಿಕನ್ ಸೇವಾಸಂಸ್ಥೆ 1 ಲಕ್ಷ ಡಾಲರ್ ನೆರವು

Update: 2021-06-01 22:36 IST

ವಾಶಿಂಗ್ಟನ್,ಜೂ.1: ಕೋವಿಡ್-19 ಎರಡನೆ ಅಲೆಯ ಪರಿಣಾಮದಿಂದ ಬಾಧಿತರಾದ ಭಾರತದಲ್ಲಿನ ಭಿನ್ನಸಾಮರ್ಥ್ಯದದ ವ್ಯಕ್ತಿಗಳಿಗೆ ನೆರವಾಗಲು ಭಾರತೀಯ-ಅಮೆರಿಕನ್ ಸೇವಾಸಂಸ್ಥೆಯೊಂದು 1 ಲಕ್ಷ ಡಾಲರ್ (72,82,395 ರೂ.)ಗಳನ್ನು ದೇಣಿಗೆಯಾಗಿ ಸಂಗ್ರಹಿಸಿದೆ.

ಲಾಸ್ ಏಂಜಲೀಸ್ ಮೂಲದ ‘ವಾಯ್ಸ ಆಫ್ ಸ್ಪೆಶಲಿ ಎಬಲ್ಡ್ ಪೀಪಲ್’ (ವಿಓಎಸ್ಎಪಿ)ಯು ದೇಣಿಗೆ ಸಂಗ್ರಹಿಸಿರುವ ಸೇವಾ ಸಂಸ್ಥೆಯಾಗಿದೆ. ಈ ಹಣವನ್ನು ಭಾರತದಲ್ಲಿನ ಕೋವಿಡ್ ಬಾಧಿತ ಭಿನ್ನಸಾಮರ್ಥ್ಯದವರಿಗೆ ದಿನಸಿ, ಪಿಪಿಇ ಕಿಟ್ಗಳು, ಮತ್ತಿತರ ಸಾಮಾಗ್ರಿಗಳನ್ನು ಒದಗಿಸಲಾಗುವುದು ವಿಎಓಎಸ್ಎಪಿ ಹೇಳಿಕೆಯಲ್ಲಿ ತಿಳಿಸಿದೆ.

ಈವರೆಗೆ ಭಾರತದಲ್ಲಿ ತಾನು 4500 ದಿನಸಿ ಹಾಗೂ ಪಿಪಿಇ ಕಿಟ್ ಗಳನ್ನು ವಿತರಿಸಿದ್ದು, 10 ಸಾವಿರ ಭಿನ್ನಸಾಮರ್ಥ್ಯದವರಿಗೆ ನೆರವಾಗುವ ಗುರಿಯನ್ನು ಹೊಂದಿರುವುದಾಗಿ ಸಂಸ್ಥೆಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News