ಪೊಲೀಸರ ವಿರುದ್ಧ ದೂರು ನೀಡಿದ್ದಕ್ಕೆ ಪ್ರತೀಕಾರ ಆರೋಪ: ಎಸ್ಪಿಗೆ ದೂರು

Update: 2021-06-01 17:06 GMT

ಉಪ್ಪಿನಂಗಡಿ: ಪೊಲೀಸ್ ದೌರ್ಜನ್ಯದ ವಿರುದ್ಧ ಪೊಲೀಸ್ ವರಿಷ್ಠರಿಗೆ  ದೂರು ನೀಡಿದ್ದಾರೆಂಬ ಆಕ್ರೋಶದಲ್ಲಿ ಆದ್ಯತಾ ಸೇವಾ ಪಟ್ಟಿಯಲ್ಲಿರುವ ಟೆಲಿಕಾಂ ಸೇವೆಯ ಕಚೇರಿಯನ್ನು ಮುಚ್ಚಿಸಲು ಪೊಲೀಸ್ ಅಧಿಕಾರಿಯೋರ್ವ ಆದೇಶಿಸಿದ್ದಾರೆಂದು ಉಪ್ಪಿನಂಗಡಿಯ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ ದ.ಕ. ಜಿಲ್ಲಾ ಎಸ್ಪಿಯವರಿಗೆ ದೂರು ನೀಡಿದ್ದಾರೆ. 

ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಕ್ಕೆ ಖಾಸಗಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯ  ಸೇವೆ ಒದಗಿಸುತ್ತಿರುವ ಪ್ರಶಾಂತ್ ಡಿಕೋಸ್ಟಾರವರು, ಈ ಬಾರಿಯ ಲಾಕ್ ಡೌನ್ ಅವಧಿಯಲ್ಲಿ  ಉಪ್ಪಿನಂಗಡಿಯಲ್ಲಿ ಪೊಲೀಸ್ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ಇಲಾಖಾ ವರಿಷ್ಠರ ಗಮನಕ್ಕೆ  ತಂದು  ಸಾರ್ವಜನಿಕವಾಗಿ ನಮ್ಮ ಮರ್ಯಾದೆ ಕಳೆದಿರುವಿ ಎಂದು ಕಚೇರಿಗೆ ಬಂದಿರುವ ಸ್ಥಳೀಯ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಪ್ರೊಬೆಷನರಿ  ಎಸೈ ಯವರು 'ನಿಮ್ಮ ಟೆಲಿಕಾಂ ಸೇವೆಯನ್ನು ಆದ್ಯತೆಯ ಸೇವೆ ಎಂದು ಮಾನ್ಯ ಮಾಡಲು ಸಾಧ್ಯವಿಲ್ಲ ಕಚೇರಿಯನ್ನು ಬಂದ್ ಮಾಡಬೇಕೆಂದು  ತಾಕೀತು ಮಾಡಿರುತ್ತಾರೆಂದು ಪ್ರಶಾಂತ್ ಅವರು ದೂರಿದ್ದು, ಸರಕಾರದ ನಿಯಮವಳಿಯಲ್ಲಿ ಟೆಲಿಕಾಂ ಸೇವೆ ಆದ್ಯತಾ ಸೇವಾ  ವಿಭಾಗದಲ್ಲಿದ್ದರೆ ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಎಸ್ಪಿ ಅವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News