2020ರ ಜುಲೈ ಬಳಿಕ ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಕೋವಿಡ್ ಸಾವು ಶೂನ್ಯ

Update: 2021-06-02 03:46 GMT

ಲಂಡನ್ : ಬ್ರಿಟನ್‌ನಲ್ಲಿ ಡೆಲ್ಟಾ ಪ್ರಬೇಧ ಸಂಬಂಧಿತ ಕೊರೋನ ವೈರಸ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡಿದ್ದರೂ, 2020ರ ಜುಲೈ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ದೇಶದಲ್ಲಿ ಕೋವಿಡ್-19 ಸೋಂಕಿತರು ಯಾರೂ ಮೃತಪಟ್ಟಿಲ್ಲ.

ಸಾಂಕ್ರಾಮಿಕ ಅರಂಭವಾದ ಮೊದಲ 28 ದಿನಗಳಲ್ಲೇ ಬ್ರಿಟನ್‌ನಲ್ಲಿ 1,27,782 ಸಾವು ಸಂಭವಿಸಿತ್ತು ಎಂದು ಸರ್ಕಾರಿ ಅಂಕಿ ಅಂಶಗಳು ಹೇಳುತ್ತವೆ. ಇದು ಇಡೀ ಯೂರೋಪ್‌ನಲ್ಲೇ ಗರಿಷ್ಠ. ಬ್ರಿಟನ್‌ನಲ್ಲಿ ಇದುವರೆಗೆ 44.9 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಸೋಮವಾರ ದೇಶದಲ್ಲಿ ಕೇವಲ ಒಬ್ಬ ಕೋವಿಡ್-19 ಸೋಂಕಿತ ಮೃತಪಟ್ಟಿದ್ದರೆ, ಮಂಗಳವಾರ ಯಾವುದೇ ಸಾವು ದಾಖಲಾಗಿಲ್ಲ. ಇದಕ್ಕೂ ಮುನ್ನ ಕಳೆದ ವರ್ಷದ ಜುಲೈ 30ರಂದು ದೇಶದಲ್ಲಿ ಯಾವುದೇ ಕೋವಿಡ್ ಸಾವು ಸಂಭವಿಸಿರಲಿಲ್ಲ.
"ಮಂಗಳವಾರ ಸಾಧಿಸಿದ ಮೈಲುಗಲ್ಲು ನಿಸ್ಸಂದೇಹವಾಗಿಯೂ ಶುಭ ಸುದ್ದಿ. ಕಳೆದ ಡಿಸೆಂಬರ್‌ನಲ್ಲಿ ಆರಂಭವಾದ ಲಸಿಕೆ ಅಭಿಯಾನ ನಿಜಕ್ಕೂ ಫಲ ನೀಡುತ್ತಿದೆ" ಎಂದು ಆರೋಗ್ಯ ಕಾರ್ಯರ್ಶಿ ಮ್ಯಾಟ್ ಹಾಂಕಾಕ್ ಹೇಳುತ್ತಾರೆ.

ಆದಾಗ್ಯೂ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಚ್ಚರ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ. ನಾವಿನ್ನೂ ವೈರಾಣುವನ್ನು ಗೆದ್ದಿಲ್ಲ. ಜನತೆ ಸಾರ್ವಜನಿಕ ಅರೋಗ್ಯ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News