×
Ad

ಕುಳಾಯಿ: ನೇಣುಬಿಗಿದು ಯುವಕ ಆತ್ಮಹತ್ಯೆ

Update: 2021-06-03 11:10 IST

ಮಂಗಳೂರು, ಜೂ.3: ಕುಳಾಯಿ ದೇವಸ್ಥಾನವೊಂದರ ಬಳಿ ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಬಾಗಲಕೋಟೆ ನಿವಾಸಿ, ಬೈಕಂಪಾಡಿ ಸಮೀಪ ಕೂರಿಕಟ್ಟದಲ್ಲಿ ವಾಸವಿದ್ದ ಸುನೀಲ್(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಇವರು ಕೂಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.

ಇಂದು ಬೆಳಗ್ಗೆ  ಕೆಲಸಕ್ಕೆ ಹೋಗುವ ಜನರು ಕುಳಾಯಿ ದೇವಸ್ಥಾನವೊಂದರ ಸಮೀಪದ ಖಾಲಿ ಜಾಗದಲ್ಲಿ ಮರದಲ್ಲಿ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News