×
Ad

ಕಾಞ೦ಗಾಡ್ ನಗರಸಭಾ ಸದಸ್ಯ ಬಿನೀಶ್ ರಾಜ್ ನಿಧನ

Update: 2021-06-03 11:24 IST

ಕಾಸರಗೋಡು, ಜೂ.3: ಕಾಞ೦ಗಾಡ್ ನಗರಸಭಾ ಸದಸ್ಯ ಬಿನೀಶ್ ರಾಜ್( 42) ಬುಧವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಎದೆನೋವು ಕಾಣಿಸಿಕೊಂಡ ಬಿನೀಶ್ ರಾಜ್ ರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದರೆನ್ನಲಾಗಿದೆ.


 ನಗರಸಭೆಯ 30ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯರಾಗಿದ್ದರು.

 ದುಬೈಯ ಇನ್ ಕಾಸ್, ನಾಸ್ಕ್  ಯುಎಇ ಸಮಿತಿಯ ಸದಸ್ಯರಾಗಿದ್ದ ಬಿನೀಶ್ ರಾಜ್ ಗಲ್ಫ್ ಉದ್ಯೋಗ ಬಿಟ್ಟು ಕಳೆದ ಜೂನ್ ನಲ್ಲಿ ಊರಿಗೆ ಆಗಮಿಸಿದ್ದರು. ಕಳೆದ ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News