×
Ad

ಕೋವಿಡ್ ಲಸಿಕೆ ತಯಾರಿಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಿ: ದಿಲ್ಲಿ ಹೈಕೋರ್ಟ್

Update: 2021-06-03 13:35 IST

ಹೊಸದಿಲ್ಲಿ: ಕೋವಿಡ್ ಲಸಿಕೆ ತಯಾರಿಸುವ ಸಾಮರ್ಥ್ಯವನ್ನು ಬಳಸದೆ ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳ ಮೇಲೆ ನರಹತ್ಯೆಯ ಪ್ರಕರಣ ದಾಖಲಿಸಬೇಕು, ಏಕೆಂದರೆ ಅವರ ಅನಾಸ್ಥೆಯಿಂದಾಗಿ ಹಲವಾರು ಸಾವುಗಳು ಸಂಭವಿಸುತ್ತಿವೆ ಎಂದು ದಿಲ್ಲಿ ಹೈಕೋರ್ಟ್ ಬುಧವಾರ ಹೇಳಿದೆ.

ಭಾರತದಲ್ಲಿ ಲಸಿಕೆ ತಯಾರಿಕೆಗೆ ಸಾಕಷ್ಟು ಅವಕಾಶ ಮತ್ತು ಮೂಲಭೂತ ಸೌಕರ್ಯಗಳಿದ್ದರೂ ಅವುಗಳು ಬಳಕೆಯಾಗುತ್ತಿಲ್ಲ ಎಂದು ಜಸ್ಟಿಸ್ ಮನಮೋಹನ್ ಹಾಗೂ ನಜ್ಮಿ ವಝೀರಿ ಅವರ ಪೀಠ ಹೇಳಿದೆ.

"ಯಾವುದಾದರೂ ವಿಜಿಲೆನ್ಸ್ ತನಿಖೆ ನಡೆಯಬಹುದು, ಆಡಿಟ್ ನಡೆಯಬಹುದೆಂಬ ಭೀತಿ. ಆದರೆ ಇದಕ್ಕೆಲ್ಲಾ ಹೆದರುವ ಸಮಯ ಇದಲ್ಲ,'' ಎಂದು ನ್ಯಾಯಾಲಯ ಹೇಳಿತಲ್ಲದೆ 'ಸ್ಪುಟ್ನಿಕ್ V' ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ರಷ್ಯನ್ ಡೈರೆಕ್ಟ್ ಇನ್ವೆಸ್ಟ್‍ಮೆಂಟ್ ಫಂಡ್ ಜತೆಗೆ ಒಪ್ಪಂದಕ್ಕೆ ಬಂದಿರುವ ಪೆನೇಶಿಯಾ ಬಯೋಟೆಕ್‍ನ ಸ್ಯಾಂಪಲ್‍ಗಳಿಗೆ ಒಪ್ಪಿಗೆ ಪ್ರಕ್ರಿಯೆಯನ್ನು ಕೇಂದ್ರ ತ್ವರಿತಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಆಮದಿತ ಲಸಿಕೆಗಳಿಗೆ ಬ್ರಿಡ್ಜ್ ಟ್ರಯಲ್ ಮಾಡಲು ಹೇಳಲಾಗಿದೆ ಎಂದು ಈ ಸಂಸ್ಥೆಯೂ ಬ್ರಿಡ್ಜ್ ಟ್ರಯಲ್ ನಡೆಸಬೇಕೆಂದು ಏಕೆ ಬಯಸುತ್ತಿದ್ದೀರಿ?'' ಎಂದು ನ್ಯಾಯಾಲಯ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News