ಗೌತಮ್ ಗಂಭೀರ್ ಫೌಂಡೇಶನ್ ಅಕ್ರಮವಾಗಿ ಕೋವಿಡ್ ಔಷಧಿ ಸಂಗ್ರಹಿಸಿಟ್ಟಿದೆ: ಹೈಕೋರ್ಟ್ ಗೆ ತಿಳಿಸಿದ ದಿಲ್ಲಿ ಸರಕಾರ

Update: 2021-06-03 08:56 GMT

ಹೊಸದಿಲ್ಲಿ: ಗೌತಮ್ ಗಂಭೀರ್ ಫೌಂಡೇಶನ್ ಕೋವಿಡ್ -19 ರೋಗಿಗಳಿಗೆ ನೀಡುವ ಫ್ಯಾಬಿಫ್ಲೂ ಔಷಧಿಯನ್ನು ಅಕ್ರಮವಾಗಿ,ಸಂಗ್ರಹಿಸಿ ವಿತರಿಸಿದೆ ಎಂದು ದಿಲ್ಲಿ ಹೈಕೋರ್ಟ್‌ಗೆ ದಿಲ್ಲಿ ಸರಕಾರದ  ಔಷಧ ನಿಯಂತ್ರಕ ಗುರುವಾರ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.

ಗೌತಮ್ ಗಂಭೀರ್ ಪ್ರತಿಷ್ಠಾನ, ಔಷಧಿ ವಿತರಕರು ಹಾಗೂ  ಇತರ ಪ್ರಕರಣಗಳ ವಿರುದ್ಧ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ದಿಲ್ಲಿ ಸರಕಾರದ ಔಷಧ ನಿಯಂತ್ರಕವು ನ್ಯಾಯಾಲಯಕ್ಕೆ ತಿಳಿಸಿದೆ ಎಂದು ಸುದ್ದಿ ಸಂಸ್ಥೆ PTI ವರದಿ ಮಾಡಿದೆ.

ಶಾಸಕ ಪ್ರವೀಣ್ ಕುಮಾರ್ ಅವರು ಡ್ರಗ್ಸ್ ಹಾಗೂ  ಕಾಸ್ಮೆಟಿಕ್ಸ್ ಕಾಯ್ದೆಯಡಿ ಇದೇ ರೀತಿಯ ಅಪರಾಧಕ್ಕೆ  ತಪ್ಪಿತಸ್ಥರೆಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಆರು ವಾರಗಳಲ್ಲಿ ಈ ಪ್ರಕರಣಗಳಲ್ಲಿ ಹೆಚ್ಚಿನ ಪ್ರಗತಿಯ ಕುರಿತು ಸ್ಥಿತಿಗತಿ ವರದಿಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಔಷಧ ನಿಯಂತ್ರಕವನ್ನು ಕೇಳಿದೆ ಹಾಗೂ  ಜುಲೈ 29 ರಂದು ಮುಂದಿನ ವಿಚಾರಣೆ ನಡೆಸಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News