ಐದು ಹಂತದ ಅನ್ ಲಾಕ್ ಯೋಜನೆ ಪ್ರಕಟಿಸಿದ ಮಹಾರಾಷ್ಟ್ರ

Update: 2021-06-03 11:26 GMT

ಮುಂಬೈ: ರಾಜ್ಯದಲ್ಲಿ ಕೋವಿಡ್ ಸಂಖ್ಯೆಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದಂತೆ ಕೋವಿಡ್‌ನಿಂದ ಭಾರೀ  ಹೊಡೆತ  ಅನುಭವಿಸಿರುವ ಮಹಾರಾಷ್ಟ್ರ  ರಾಜ್ಯವು 5 ಹಂತದಲ್ಲಿ ಲಾಕ್ ಡೌನ್ ತೆಗೆಯುವ ತಂತ್ರದ ಮೊರೆ ಹೋಗಲು ನಿರ್ಧರಿಸಿದೆ.

ಹಂತ 1 ಎಂದು ವರ್ಗೀಕರಿಸಲಾದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ಮೊದಲ ಹಂತದಲ್ಲಿ ಥಾಣೆ ಸೇರಿದಂತೆ 18 ಜಿಲ್ಲೆಗಳಿವೆ.

ಎರಡನೇ ಅಲೆಯ ವೈರಸ್ ನಿಂದ ಉದ್ಬವಿಸಿರುವ  ಪರಿಸ್ಥಿತಿಯನ್ನು ವೇಗವಾಗಿ ನಿಯಂತ್ರಣದಲ್ಲಿಟ್ಟುಕೊಂಡಿರುವ ಭಾರತದ ಆರ್ಥಿಕ ರಾಜಧಾನಿ ಮುಂಬೈ ಮಹಾನಗರ  2ನೇ ಹಂತದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News