×
Ad

ಹಿರಿಯ ಸಿಪಿಎಂ ಮುಖಂಡ ಗೋವಿಂದ ಶೆಟ್ಟಿಗಾರ್ ನಿಧನ

Update: 2021-06-03 19:16 IST

ಕುಂದಾಪುರ, ಜೂ.3: ಸಿಪಿಐ(ಎಂ)ಪಕ್ಷದ ಹಿರಿಯ ಮುಖಂಡ, ಕರ್ನಾಟಕ ಪ್ರಾಂತ ರೈತ ಸಂಘದ ಮಾಜಿ ತಾಲೂಕು ಅಧ್ಯಕ್ಷರಾಗಿದ್ದ ಕೆ.ಗೋವಿಂದ ಶೆಟ್ಟಿಗಾರ್ ಇಂದು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು. 88 ವರ್ಷ ಪ್ರಾಯದ ಶೆಟ್ಟಿಗಾರ್, ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕುಂದಾಪರದ ಪ್ರಭಾಕರ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ವೃತ್ತಿ ಆರಂಭಿಸಿದ ಗೋವಿಂದ ಶೆಟ್ಟಿಗಾರ್,ಬಳಿಕ ಕೋಟೇಶ್ವರದಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಿದ್ದರು. 1970ರಲ್ಲಿ ಸಿಪಿಐ(ಎಂ) ಪಕ್ಷದಲ್ಲಿ ರಾಜಕೀಯ ಜೀವನ ಪ್ರಾರಂಭಿಸಿದ ಅವರು,ಭೂಸುಧಾರಣೆ ಕಾನೂನು ಜಾರಿಗೆ, ಗೇಣಿದಾರ ರೈತರ ಭೂಮಿ ಖಾಯಮಾತಿಗಾಗಿ ನಡೆದ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಭೂರಹಿತರಿಗೆ, ಗೇಣಿದಾರರಿಗೆ ಭೂಮಿ ಕೊಡಿಸುವಲ್ಲಿ ಮಹತ್ವದ ಹೋರಾಟ ನಡೆಸಿದ್ದರು.

ಕೋಟೇಶ್ವರ ಗ್ರಾಪಂಗೆ ಎರಡು ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಪ್ರಾಮಾಣಿಕ ಜನಸೇವೆಯೊಂದಿಗೆ, ಕರಿಯ ದೇವಾಡಿಗ, ದಾಸ ಭಂಡಾರಿ ಅವರ ಜೊತೆ ಸೇರಿ ಊರಿನ ಜನರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಜನಾನು ರಾಗಿಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದರು.

ಸಂತಾಪ: ಅಗಲಿದ ಕಾಂ.ಗೋವಿಂದ ಶೆಟ್ಟಿಗಾರ್ ಅವರಿಗೆ ಸಿಪಿಎಂ ಕುಂದಾಪುರ ವಲಯ ಸಮಿತಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದೆ. ಪಕ್ಷದ ಮುಖಂಡರಾದ ಸುರೇಶ್ ಕಲ್ಲಾಗರ, ದಾಸಭಂಡಾರಿ, ಕರಿಯ ದೇವಾಡಿಗ ಮುಂತಾದವರು ಇದರಲ್ಲಿ ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News