ಉತ್ತರಾಖಂಡದಲ್ಲಿ 2,000ಕ್ಕೂ ಅಧಿಕ ಪೊಲೀಸರಿಗೆ ಕೋವಿಡ್-19 ಸೋಂಕು

Update: 2021-06-03 14:27 GMT
ಸಾಂದರ್ಭಿಕ ಚಿತ್ರ

ಡೆಹ್ರಾಡೂನ್,ಜೂ.3: ಕೋವಿಡ್ ಎರಡನೇ ಅಲೆಯಲ್ಲಿ ಉತ್ತರಾಖಂಡದ 2,000ಕ್ಕೂ ಅಧಿಕ ಪೊಲೀಸರು ಸೋಂಕಿಗೆ ತುತ್ತಾಗಿದ್ದು,ಈ ಪೈಕಿ ಶೇ.93ರಷ್ಟು ಸಿಬ್ಬಂದಿಗಳು ಸೋಂಕಿಗೆ ಮುನ್ನ ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದರು ಎಂದು ಅಧಿಕಾರಿಗಳು ಹಂಚಿಕೊಂಡಿರುವ ಮಾಹಿತಿಗಳು ತೋರಿಸಿವೆ.

ಎಪ್ರಿಲ್ ಮತ್ತು ಮೇ ನಡುವೆ ಕರ್ತವ್ಯದಲ್ಲಿದ್ದಾಗ 2,382 ಪೊಲೀಸರು ಸೋಂಕಿಗೆ ತುತ್ತಾಗಿದ್ದು,ಈ ಪೈಕಿ 2204 ಸಿಬ್ಬಂದಿಗಳು ಈಗಾಗಲೇ ಚೇತರಿಸಿಕೊಂಡಿದ್ದಾರೆ,ಐವರು ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಇಬ್ಬರು ಪೊಲೀಸರು ಇತರ ಕಾಯಿಲೆಗಳನ್ನು ಹೊಂದಿದ್ದರು ಮತ್ತು ಇತರ ಮೂವರು ಲಸಿಕೆಯನ್ನು ಪಡೆದಿರಲಿಲ್ಲ ಎಂದು ಮಾಹಿತಿಗಳು ತಿಳಿಸಿವೆ.

ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಸೋಂಕುಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಡಿಐಜಿ ಹಾಗೂ ಉತ್ತರಾಖಂಡದ ಮುಖ್ಯ ಪೊಲೀಸ್ ವಕ್ತಾರ ನಿಲೇಶ ಆನಂದ ಭರ್ಣೆ ಅವರು,ರೋಗದ ತೀವ್ರತೆ ಮತ್ತು ಸಾವುಗಳ ಸಂಖ್ಯೆ ಕಡಿಮೆಯೇ ಇವೆ. ಲಸಿಕೆಯ ಡೋಸ್‌ಗಳನ್ನು ಪಡೆದ ಬಳಿಕ ಸೋಂಕು ತಗುಲುವುದಿಲ್ಲ ಎಂಬ ಖಾತರಿಯನ್ನು ಲಸಿಕೆ ನೀಡುವುದಿಲ್ಲ ಎಂದು ಲಸಿಕೆಗಳ ತಯಾರಕರೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News