ಬಾಳೆಬರೆ ಘಾಟ್ ಸಂಚಾರ ನಿರ್ಬಂಧ: ಜೂ.15ರವರೆಗೆ ವಿಸ್ತರಣೆ
Update: 2021-06-03 20:47 IST
ಉಡುಪಿ, ಜೂ.3: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಬಾಳೆಬರೆ ಘಾಟ್‌ನಲ್ಲಿ ಎರಡು ಕಡೆಗಳಲ್ಲಿ 1500ಮೀ. ಉದ್ದಕ್ಕೆ ಕಾಂಕ್ರೀಟ್ ಪೇವ್‌ಮೆಂಟ್ ಕಾಮಗಾರಿ ಸಂಬಂಧ ಎ.22ರಿಂದ ಜೂ.5ರವರೆಗೆ ವಿಧಿಸಿದ್ದ ವಾಹನ ಸಂಚಾರ ನಿರ್ಬಂಧವನ್ನು ಜೂ.15ರವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶದಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ವಿಭಾಗ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಇಂಜಿನಿಯರ್ ಅವರ ಕೋರಿಕೆ ಮೇರೆಗೆ ಕಾಮಗಾರಿ ಪೂರ್ಣಗೊಂಡು ಜಲಸಂಸ್ಕರಣೆಗೆ ಕಾಲಾವಕಾಶದ ಅಗತ್ಯವಿರುವುದರಿಂದ ವಾಹನ ಸಂಚಾರ ನಿಷೇಧವನ್ನು ಜೂ.15ರವರೆಗೆ ವಿಸ್ತರಿಸಲಾಗಿದೆ ಎಂದು ಆದೇಶ ದಲ್ಲಿ ತಿಳಿಸಲಾಗಿದೆ.
ವಾಹನಗಳು ಜೂ.15ರವರೆಗೆ ಈ ಹಿಂದೆ ಸೂಚಿಸಿದ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಆದೇಶದಲ್ಲಿ ಹೇಳಲಾಗಿದೆ.