×
Ad

ಉತ್ತರಪ್ರದೇಶ: ಲಸಿಕೆಗೆ ಹೆದರಿ ಡ್ರಮ್ ಹಿಂದೆ ಅಡಗಿ ಕುಳಿತ ವೃದ್ಧೆ

Update: 2021-06-03 21:08 IST
photo: NDTV

ಲಕ್ನೋ: ಕೋವಿಡ್ ಲಸಿಕೆ ತಂಡದಿಂದ ತಪ್ಪಿಸಿಕೊಳ್ಳಲು  ವೃದ್ಧ ಮಹಿಳೆಯೊಬ್ಬರು ಡ್ರಮ್ ಹಿಂದೆ ಅಡಗಿ ಕುಳಿತಿದ್ದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.  ಗ್ರಾಮೀಣ ಭಾರತದ ಕೆಲವು ಭಾಗಗಳಲ್ಲಿ ಜನರಿಗೆ ಚುಚ್ಚುಮದ್ದು ನೀಡುವುದು ದೊಡ್ಡ ಸವಾಲಾಗಿದೆ ಎಂದು ಇದು  ಒತ್ತಿಹೇಳುತ್ತಿದೆ

ಬಿಜೆಪಿ ಶಾಸಕಿ ಸರಿತಾ ಭದೌರಿಯಾ ಹಾಗೂ ಆರೋಗ್ಯ ಇಲಾಖೆಯ ತಂಡ ಲಸಿಕೆ ನೀಡಲು ಹಾಗೂ ಅದರ ಕುರಿತ ಜಾಗೃತಿ ಮೂಡಿಸಲು  ಇಟವಾದಲ್ಲಿನ ಚಂದನ್‌ಪುರ ಗ್ರಾಮಕ್ಕೆ ತೆರಳಿದ್ದರು. ಅವರು ಹಳ್ಳಿಯ ಮನೆಯೊಂದನ್ನು ತಲುಪಿದಾಗ, ಅವರು ಕೆಲವು ಜನರನ್ನು ಭೇಟಿಯಾಗಲು ಯಶಸ್ವಿಯಾದರು. ಆದರೆ ಹರ್ ದೇವಿ, ಹೆಸರಿನ 80 ರ ವಯಸ್ಸಿನ ವೃದ್ದೆ, ಲಸಿಕೆ ಯಿಂದ  ತಪ್ಪಿಸಿಕೊಳ್ಳಲು ಮೊದಲು ಬಾಗಿಲಿನ ಹಿಂದೆ ಆ ನಂತರ ಮನೆಯಲ್ಲಿ ದೊಡ್ಡ ಡ್ರಮ್‌ನ ಹಿಂದೆ ಓಡಿ ಅಡಗಿಕೊಂಡರು. ವೀಡಿಯೊದಲ್ಲಿ  ವೃದ್ಧೆ ಮಹಿಳೆ ಕತ್ತಲೆಯ ಕೋಣೆಯೊಳಗೆ ಡ್ರಮ್‌ನ ಹಿಂದೆ ಕುಳಿತಿರುವುದನ್ನು ಕಾಣಬಹುದು.

"ವ್ಯಾಕ್ಸಿನೇಷನ್ ಜನರು ಬಂದಿದ್ದಾರೆ. ನೀವು ಎಲ್ಲಿದ್ದೀರಿ, ಅಮ್ಮಾ?" ಎಂದು ಹೇಳುವುದು ವೀಡಿಯೊದಲ್ಲಿ ಕೇಳುತ್ತದೆ. ವೃದ್ದೆ ಮಹಿಳೆ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಾರೆ.

"ಶಾಸಕರು ಇಲ್ಲಿದ್ದಾರೆ. ದಯವಿಟ್ಟು ಹೊರಗೆ ಬನ್ನಿ" ಎಂದು ಆರೋಗ್ಯ ಕಾರ್ಯಕರ್ತರೊಬ್ಬರು ಮಹಿಳೆಯನ್ನು ಒತ್ತಾಯಿಸುತ್ತಾರೆ.

ನಂತರ ವೈದ್ಯರೊಬ್ಬರು ಮಹಿಳೆಯನ್ನು ಸಮೀಪಿಸಿ ಹೊರಗೆ ಬರಲು ಸಹಕರಿಸುತ್ತಾರೆ. "ನಾನು ವೈದ್ಯೆ. ನಿಮಗೆ ಇಂಜೆಕ್ಷನ್ ನೀಡಲು ನಾನು ಇಲ್ಲಿಗೆ ಬರಲಿಲ್ಲ. ನಿಮ್ಮೊಂದಿಗೆ ಮಾತನಾಡಲು ನಾವು ಇಲ್ಲಿದ್ದೇವೆ. ನಿಮ್ಮ ಶಾಸಕರನ್ನು ಕೇಳಿ" ಎಂದು ವೈದ್ಯರು ಹೇಳುತ್ತಾರೆ.

ಅಂತಿಮವಾಗಿ ಮಹಿಳೆ ತಾನು ಅಡಗಿ ಕುಳಿತ್ತಿದ್ದ ಸ್ಥಳ ದಿಂದ ಹೊರಬಂದು ಶಾಸಕರನ್ನು ಭೇಟಿಯಾಗುತ್ತಾರೆ. ಅದೇ ದಿನ ಆಕೆಗೆ ಲಸಿಕೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News