×
Ad

'5 ಸಾವಿರ ರೂ. ಪ್ಯಾಕೇಜ್' ಖಾಸಗಿ ಶಾಲಾ ಶಿಕ್ಷಕರ ಮುಗಿಗೆ ತುಪ್ಪ ಸವರುವ ಕ್ರಮ: ಎಂ.ಅರ್.ಮಾನ್ವಿ

Update: 2021-06-03 22:21 IST

ಭಟ್ಕಳ : ಮುಖ್ಯಮಂತ್ರಿ ರಾಜ್ಯದ ಖಾಸಗಿ ಶಾಲಾ ಶಿಕ್ಷಕರಿಗೆ ಇಂದು ಘೋಷಿಸಿರುವ ಐದು ಸಾವಿರ ರೂಗಳ ಪ್ಯಾಕೇಜ್ ಶಿಕ್ಷಕರ ಮೂಗಿಗೆ ತುಪ್ಪ ಸವಾರಿದಂತೆ ಆಗಿದೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ ಅಸೋಸಿಯೇಷನ್ ಅಧ್ಯಕ್ಷ ಎಂ.ಅರ್. ಮಾನ್ವಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿ ಖಾಸಗಿ ಶಾಲಾ ಶಿಕ್ಷಕರು ಕೋವಿದ್ ನಿಂದಾಗಿ ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ. ಈಗಲೂ ಅವರ ಬಳಿ ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಸಂದರ್ಭದಲ್ಲಿ ತುಂಬಾ ಆಸೆಗಳನ್ನು ಇಟ್ಟುಕೊಂಡಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿಗಳ 5000 ಘೋಷಣೆಯಿಂದಾಗಿ ನಿರಾಶೆಯಾಗಿದೆ.  ಕನಿಷ್ಠ ಪಕ್ಷ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಅವರಿಗೆ ಪ್ರತಿ ತಿಂಗಳು 5000 ಹಾಗೂ 25 ಕೆಜಿ ಅಕ್ಕಿಯನ್ನು ಕೊಡುವಂತ ಯೋಜನೆ ಘೋಷಿಸಿದ್ದರೆ ಅವರ ಜೀವನಕ್ಕೆ ಸಹಯಾವಾಗ ಬಹುದಿತ್ತು. ಇದನ್ನು ಬಿಟ್ಟು ಮುಖ್ಯಮಂತ್ರಿಗಳು ಕೇವಲ ಐದು ಸಾವಿರ ರೂಪಾಯಿ ಕೊಟ್ಟು  ಕೈತೊಳೆದುಕೊಂಡಿದ್ದಾರೆ. ಆಲ್ ಇಂಡಿಯ ಐಡಿಯಲ್ ಟೀಚರ್ಸ್ ಅಸೋಶಿಯೇಶನ್ ಹಲವು ಬಾರಿ ರಾಜ್ಯದ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಈ ಕುರಿತು ಮಾನವಿಯನ್ನು ಕೂಡ ಅರ್ಪಿಸಿದೆ. ಆದರೆ ಶಿಕ್ಷಕರ ಮತ್ತು ಶಿಕ್ಷಕ ಸಂಘಟನೆಗಳ ಮನವಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಮುಖ್ಯಮಂತ್ರಿಗಳು ಕೇವಲ ಕಣ್ಣೊರೆಸುವ ತಂತ್ರ ವನ್ನು ಕೈಗೊಂಡಿದ್ದಾರೆ ಎಂದು ಮಾನ್ವಿ ಆರೋಪಿಸಿದ್ದು, ಲಾಕ್ಡೌನ್ ಆರಂಭವಾದಂದಿನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು ಕನಿಷ್ಠ 5000 ಹಾಗೂ 25 ಕೆಜಿ ಅಕ್ಕಿಯನ್ನು ಕೊಡುವ ಯೋಜನೆ ರೂಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News