ಜುಗಾರಿ ಆಟವಾಡುತ್ತಿದ್ದ ಆರೋಪದಲ್ಲಿ 8 ಮಂದಿ ಸೆರೆ
Update: 2021-06-03 22:33 IST
ಮಂಗಳೂರು, ಜೂ.3: ಕಾವೂರಿನ ಕುಂಜತ್ತಬೈಲ್ ದೇವಿನಗರದಲ್ಲಿ ಮನೆಯೊಂದರ ಬಳಿ ಜುಗಾರಿ ಆಡುತ್ತಿದ್ದ 8 ಮಂದಿಯನ್ನು ಕಾವೂರು ಎಸ್ಸೈ ಹರೀಶ್ ಎಚ್.ವಿ. ನೇತೃತ್ವದ ಪೊಲೀಸರು ಬಂಧಿಸಿ ಇಸ್ಪಿಟ್ ಆಟಕ್ಕೆ ಬಳಸಿದ 13,775 ರೂ. ನಗದು ಸಹಿತ 15,225 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಗಿಲ್ಬರ್ಟ್ ನೊರೊನ್ಹಾ, ರಾಜು, ರಿಜ್ವಾನ್, ಶಿವಾಜಿ, ಅಲೆಗ್ಸಾಂಡರ್, ತಂಗಸ್ವಾಮಿ, ಮಂಜುನಾಥ, ಸ್ಟಿವಾರ್ಟ್ ಬಂಧಿತ ಆರೋಪಿಗಳಾಗಿದ್ದಾರೆ. ಕೊರೋನ ಸೋಂಕು ಪಸರಿಸುವುದನ್ನು ತಡೆಯಲು ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಸಿ ಹಾಗೂ ಅಕ್ರಮವಾಗಿ ಜುಗಾರಿ ಆಡುತ್ತಿದ್ದರು ಎಂದು ಆರೋಪಿಸಲಾಗಿದೆ.