×
Ad

ಕೋವಿಡ್ ನಿಯಂತ್ರಣಕ್ಕೆ ಬಂಟ್ವಾಳ ಪುರಸಭೆಯಿಂದ ಅವಿರತ ಶ್ರಮ: ಅಧ್ಯಕ್ಷ ಶರೀಫ್

Update: 2021-06-04 12:46 IST

ಬಂಟ್ವಾಳ, ಜೂ.4: ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಪಾಣೆಮಂಗಳೂರು 24ನೇ ವಾರ್ಡ್ ನ ಟಾಸ್ಕ್ ಫೋರ್ಸ್ ಸಭೆ ಶುಕ್ರವಾರ ಬೋಗೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಪುರಸಭೆಯ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಾರ್ಡ್ ನಲ್ಲಿ ಈವರೆಗೆ ನಡೆದ ಕೋವಿಡ್ ನಿಯಂತ್ರಣದ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಮುಹಮ್ಮದ್ ಶರೀಫ್ ಮಾತನಾಡಿ,  ಕೋವಿಡ್ ನಿಯಂತ್ರಣಕ್ಕೆ ಬಂಟ್ವಾಳ ಪುರಸಭೆಯ ಆಡಳಿತ ಅವಿರತವಾಗಿ ಶ್ರಮಿಸುತ್ತಿದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕು. ಸೋಂಕು ಪೀಡಿತರ ಆರೋಗ್ಯದ ಮೇಲೆ ನಿಗಾ ಇಡುವ ಮೂಲಕ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಕೋವಿಡ್ ಲಸಿಕೆ ಅಭಿಯಾನವನ್ನು ಯಶಸ್ಸು ಮಾಡುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ವಾರ್ಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಅಬೂಬಕರ್ ಸಿದ್ದೀಕ್, ಆರೋಗ್ಯ ಅಧಿಕಾರಿ ಜಯಾ ಶಂಕರ್, ಬಂಟ್ವಾಳ ನಗರ ಠಾಣೆಯ ಎಎಸ್ಸೈ ದೇವಪ್ಪ, ಆರೋಗ್ಯ ಕಾರ್ಯಕರ್ತೆ ನಮಿತಾ, ಆಶಾ ಕಾರ್ಯಕರ್ತೆಯರಾದ ಹೇಮಲತಾ, ಜ್ಯೋತಿಲಕ್ಷ್ಮೀ, ಶಿಕ್ಷಕಿಯರಾದ ಪ್ರೇಮಾ, ವಿನ್ನಿ ಫ್ರೆಡ್, ಎನ್.ಜೆ.ಎಂ. ಅಧ್ಯಕ್ಷ ಮುಹಮ್ಮದ್ ಸಜಿಪ, ಎಂ.ಜೆ.ಎಂ. ಅಧ್ಯಕ್ಷ ಅಬ್ದುರ್ರಹ್ಮಾನ್, ಪ್ರಮುಖರಾದ ಮುಸ್ತಫಾ ಬೋಗೋಡಿ, ಶರೀಫ್ ಬೋಯ, ಮಜೀದ್ ಬೋಗೋಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News