×
Ad

​ಇರಾ: ಲಸಿಕೆಯ ಆನ್ ಲೈನ್ ನೋಂದಣಿ ಅಭಿಯಾನ ಆರಂಭ

Update: 2021-06-04 17:14 IST

ಕೊಣಾಜೆ : ಇರಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೋನ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಆನ್ ಲೈನ್ ನೋಂದಣಿ ಅಭಿಯಾನ ಶುಕ್ರವಾರದಿಂದ ಆರಂಭವಾಗಿದೆ.

ಗ್ರಾಮ ಪಂ. ಅಧ್ಯಕ್ಷೆ ಆಗ್ನೇಶ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯತಿ ಮಟ್ಟದ ಕಾರ್ಯಪಡೆ ಸಭೆಯಲ್ಲಿ ಲಸಿಕಾ ಅಭಿಯಾನ ಕುರಿತು ಅವಲೋಕನ ನಡೆಸಲಾಯಿತು.

ವಾರ್ಡ್ ಕಾರ್ಯಪಡೆ ನೇತ್ರತ್ವದಲ್ಲಿ ಮನೆ-ಮನೆ ಭೇಟಿ ನೀಡಿ ಅರ್ಹರನ್ನು ಆನ್ ಲೈನ್ ಮೂಲಕ ನೋಂದಾಯಿಸುವ ಕಾರ್ಯವನ್ನು ಆರಂಭಿಸಲಾಗಿದೆ. ಜಾಗೃತಿ ಬ್ಯಾನರ್, ಗೋಡೆ ಚಿತ್ರ, ಬರಹ ಮೂಲಕ ಕೊರೋನ ತಡೆ ಹಾಗೂ ಲಸಿಕಾ  ಅಭಿಯಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು.

ಜಿಲ್ಲಾ ನೋಡೆಲ್ ಸಂಸ್ಥೆ ನಿರ್ದೇಶಕರಾದ ಶೀನ ಶೆಟ್ಟಿ ಕೃಷ್ಣ ಮೂಲ್ಯ ಲಸಿಕಾ ಅಭಿಯಾನದ ಬಗ್ಗೆ ಮಾಹಿತಿ ನೀಡಿ ಸಂವಾದ ನಡೆಸಿದರು.

ಮನೆ ಮನೆ ಲಸಿಕಾ ನೋಂದಣಿ ಕಾರ್ಯವಿಧಾನದ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯ ಪ್ರತಾಪ್ ಚಂದ್ರ ತರಬೇತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೊಹಿದು ಕುಂಞ, ತಾಲೂಕು ಪಂಚಾಯಿತಿ ಮಾಜಿ ಅಧ‍್ಯಕ್ಷ ಚಂದ್ರಹಾಸ ಕರ್ಕೆರಾ,  ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಝಾಕ್,  ನೋಡಲ್ ಅಧಿಕಾರಿ ಅಕ್ಷತಾ,  ಗ್ರಾಮಕರಣಿಕರಾದ ಜಗದೀಶ ಶೆಟ್ಟಿ, ಗ್ರಾಮ ಪಂಚಾಯತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು, ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಕಾರ್ಯದರ್ಶಿ ನಳಿನಿ ಎ ಕೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News