ಸಿಬಿಐ ಉದ್ಯೋಗಿಗಳು ಕಚೇರಿಗೆ ಬರುವಾಗ ಜೀನ್ಸ್, ಟಿ-ಶರ್ಟ್ ಧರಿಸುವಂತಿಲ್ಲ, ಗಡ್ಡ ಬಿಡುವಂತ್ತಿಲ್ಲ

Update: 2021-06-04 14:31 GMT

ಹೊಸದಿಲ್ಲಿ: ಸಿಬಿಐಗೆ ಸೇವೆ ಸಲ್ಲಿಸುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ  ಕಚೇರಿಗೆ ಬರುವಾಗ ‘ಫಾರ್ಮಲ್ಸ್’ ಧರಿಸಿರಬೇಕು ಹಾಗೂ ಜೀನ್ಸ್, ಸ್ಪೋಟ್ರ್ಸ್ ಶೂ ಮತ್ತಿತರ ಉಡುಗೆಗಳನ್ನು ಧರಿಸಿ ಬರುವುದನ್ನು ಸಹಿಸಲಾಗುವುದಿಲ್ಲ ಎಂದು ಸಿಬಿಐನ ನೂತನ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಹೇಳಿದ್ದಾರೆ.

ಸಿಬಿಐ ನಿರ್ದೇಶಕರ ಹೊಸ ಆದೇಶದಂತೆ ಪುರುಷರು ಶರ್ಟ್, ಫಾರ್ಮಲ್ ಟ್ರೌಸರ್ಸ್ ಹಾಗೂ ಫಾರ್ಮಲ್ ಶೂ ಧರಿಸಿರಬೇಕು ಹಾಗೂ ಕಚೇರಿಗೆ ಬರುವಾಗ ಕ್ಲೀನ್ ಶೇವ್ಡ್ ಆಗಿರಬೇಕು ಎಂದು ತಿಳಿಸಲಾಗಿದೆ.

“ಸಿಬಿಐನ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸೀರೆ, ಸೂಟ್, ಫಾರ್ಮಲ್ ಶರ್ಟ್ ಹಾಗೂ ಟ್ರೌಸರ್ಸ್ ಧರಿಸಬೇಕು, ಜೀನ್ಸ್, ಟಿಶರ್ಟ್, ಅಥವಾ ಇತರ ಕ್ಯಾಶುವಲ್ ಉಡುಗೆಗೆ ಅನುಮತಿಯಿಲ್ಲ,'' ಎಂದು ಆದೇಶ ತಿಳಿಸಿದೆ.

ಈ ಆದೇಶ ದೇಶಾದ್ಯಂತ ಎಲ್ಲಾ ಸಿಬಿಐ ಕಚೇರಿಗಳಿಗೂ ಅನ್ವಯಿಸಲಿದೆ ಹಾಗೂ ಎಲ್ಲಾ ಶಾಖಾ ಮುಖ್ಯಸ್ಥರೂ ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News