×
Ad

ರಾಜ್ಯ ಕಟ್ಟಡ ಕಾರ್ಮಿಕರ ಅರ್ಜಿ ಸ್ವೀಕಾರಕ್ಕೆ ಜು.15ರವರೆಗೆ ಅವಕಾಶ

Update: 2021-06-04 22:34 IST

ಉಡುಪಿ, ಜೂ.4: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೀಡಲಾಗುವ ವಿವಿಧ ಸಹಾಯಧನ, ಪ್ರೋತ್ಸಾಹಧನವನ್ನು ಪಡೆಯಲು ಅರ್ಜಿ ಸ್ವೀಕಾರಕ್ಕೆ ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು ಜು.15ರವರೆಗೆ ವಿಸ್ತರಿಸ ಲಾಗಿದ್ದು, ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೇವಾ ಸಿಂಧು ಕೇಂದ್ರ ಓಪನ್: ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಸರಕಾರ ಕಾರ್ಮಿಕರಿಗೆ, ಅಟೋ ಚಾಲಕರಿಗೆ, ಟ್ಯಾಕ್ಸಿ ಚಾಲಕರಿಗೆ ಹಾಗೂ ಕಲಾವಿದರಿಗೆ ಸಹಾಯಧನ ಘೋಷಿಸಿದ್ದು, ಈ ಸಂಬಂಧ ಫಲಾನು ಭವಿಗಳು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸ ಬೇಕಾಗಿದ್ದು, ಇವರಿಗೆ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಸಂಪೂರ್ಣ ಸೀಲ್‌ಡೌನ್ ಮಾಡಲಾದ ಪಂಚಾಯತ್ ವ್ಯಾಪ್ತಿಯನ್ನು ಹೊರತು ಪಡಿಸಿ ನೋಂದಾಯಿತ (ಸಿಎಸ್‌ಸಿ) ಸೇವಾ ಸಂಧು ಕೇಂದ್ರಗಳನ್ನು ಜೂ.6ರವರೆಗೆ ಬೆಳಗ್ಗೆ 6:00ರಿಂದ 10:00ರವರೆಗೆ ತೆರೆದು ಮೇಲೆ ತಿಳಿಸಿದ ಸೇವೆಗಳಿಗೆ ನೊಂದಾಯಿಸಲು ಅನುಮತಿ ನೀಡಲಾಗಿದೆ.

ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾದ 40 ಗ್ರಾಪಂ ವ್ಯಾಪ್ತಿಯಲ್ಲಿ ಜೂ.5 ಮತ್ತು 6ರಂದು ಬೆಳಗ್ಗೆ 6:00ರಿಂದ 10:00ರವರೆಗೆ ಮಾತ್ರ ಸೇವಾ ಸಿಂಧು (ಸಿಎಸ್‌ಸಿ) ಕೇಂದ್ರಗಳನ್ನು ತೆರೆದು ಮೇಲೆ ತಿಳಿಸಿದ ಎಲ್ಲಾ ಸೇವೆಗಳನ್ನು ನೋಂದಾವಣಿ ಮಾಡಲು ಅನುಮತಿ ನೀಡಲಾಗಿದೆ.
ಸೇವಾಸಿಂಧು ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್‌ಗಳನ್ನು ಧರಿಸಿಕೊಂಡು ಕೋವಿಡ್-19 ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸ ಬೇಕು. ಜನಜಂಗುಳಿ ಆಗದಂತೆ ಎಚ್ಚರ ವಹಿಸಬೇಕು. ನಿಗದಿತ ಶುಲ್ಕ ಮಾತ್ರ ಪಡೆಯಬೇಕು. ದುಬಾರಿ ಶುಲ್ಕ ಪಡೆಯದಂತೆ ಎಚ್ಚರಿಸಲಾಗಿದೆ. ಈ ಸೂಚನೆಗಳನ್ನು ಪಾಲಿಸದ ಸಿಎಸ್‌ಸಿ ಸೇವಾ ಸಿಂಧು ಕೇಂದ್ರಗಳ ಪರವಾನಿಗೆಯನ್ನು ಕೋವಿಡ್-19 ಮುಗಿಯುವ ತನಕ ಅಮಾನತಿನಲ್ಲಿಡ ಲಾಗುವುದು ಅಲ್ಲದೇ ವಿಕೋಪ ನಿರ್ವಹಣೆ ಕಾಯ್ದೆ-2005ರಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News