ಬ್ಯಾಂಕಿಂಗ್ ಸೇವೆ ಮುಂದುವರಿಕೆ : ಉಡುಪಿ ಜಿಲ್ಲಾಧಿಕಾರಿ
Update: 2021-06-04 22:38 IST
ಉಡುಪಿ, ಜೂ.4: ರಾಜ್ಯ ಸರಕಾರ ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್‌ನ್ನು ಜೂ.7ರಿಂದ ಜೂ.14ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿ ರುವುದರಿಂದ, ಜಿಲ್ಲೆಯಲ್ಲಿ ಬದಲಾದ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿಂಗ್ ಸೇವೆಯನ್ನು ಜೂ.14ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬ್ಯಾಂಕಿಂಗ್ ಕಾರ್ಯಾವಧಿಯನ್ನು ಮೇ 28ರಿಂದ ಅನ್ವಯಿಸುವಂತೆ ಬೆಳಗ್ಗೆ 8 ರಿಂದ ಅಪರಾಹ್ನ 12 ರವರೆಗೆ ಬದಲಾಯಿಸಲಾಗಿದ್ದು, ಅದು ಜೂ.6ರವರೆಗೆ ಚಾಲ್ತಿಯಲ್ಲಿತ್ತು. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಇದನ್ನು ಜೂ.14 ರವರೆಗೆ ವಿಸ್ತರಿಸಲಾಗಿದ್ದು, ಈ ಅವಧಿಯಲ್ಲಿ ಬ್ಯಾಂಕುಗಳು ಬೆಳಗ್ಗೆ 8ರಿಂದ ಅಪರಾಹ್ನ 12ರವರೆಗೆ ಕಾರ್ಯಾಚರಿಸಲಿವೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.