ಗರ್ಭಿಣಿಗೆ ಚಿಕಿತ್ಸೆ ನಿರಾಕರಣೆ ಪ್ರಕರಣ: ಸೂಕ್ತ ಕ್ರಮಕ್ಕೆ ಮನವಿ
ಮಂಗಳೂರು, ಜೂ.4: ನಗರದ ನಿವಾಸಿ ಖತೀಜಾ ಜಾಸ್ಮಿನ್ ಎಂಬ ತುಂಬು ಗರ್ಭಿಣಿಗೆ ಹೆರಿಗೆ ನೋವಿನ ವೇಳೆ ಚಿಕಿತ್ಸೆ ನೀಡಲು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಎಸ್‌ಡಿಪಿಐ ನಿಯೋಗ ದ.ಕ.ಜಿಲ್ಲಾಧಿಕಾರಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಡಾ.ಪ್ರಿಯಾ ಬಳ್ಳಾಲ್ ತನ್ನ ಪ್ರಭಾವ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲು ಅವಕಾಶ ನೀಡದಂತೆ ಮಾಡಿ ವೈದ್ಯಕೀಯ ವೃತ್ತಿಗೆ ದ್ರೋಹ ಎಸಗಿದ್ದಾರೆ. ಇದರಿಂದ ಖತೀಜಾ ಜಾಸ್ಮಿನ್ ಏಳೆಂಟು ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ. ಹಾಗಾಗಿ ಡಾ. ಪ್ರಿಯಾ ಬಲ್ಲಾಳ್, ಡಾ. ಜಯಪ್ರಕಾಶ್, ಡಾ. ಮುರಳೀಧರ್ ಹಾಗೂ ನಗರದ ಹಲವು ಆಸ್ಪತ್ರೆಗಳ ಆಡಳಿತ ಮಂಡಳಿಯ ಧೋರಣೆಗನ್ನು ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಆಗ್ರಹಿಸಿದೆ.
ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುಹೈಲ್ ಪಳ್ನೀರ್, ಸಂತ್ರಸ್ತ ಮಹಿಳೆ ಖತೀಜಾ ಜಾಸ್ಮಿನ್ ಮತ್ತಾಕೆಯ ತಂದೆ ನೂರ್ ಮುಹಮ್ಮದ್, ಸಹೋದರ ಶಂಶೀರ್ ಉಪಸ್ಥಿತರಿದ್ದರು.