×
Ad

ಮಂಗಳೂರು: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆ

Update: 2021-06-04 22:42 IST

ಮಂಗಳೂರು, ಜೂ.4: ಮಂಗಳೂರು ಮಹಾನಗರಪಾಲಿಕೆಯು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ನಮ್ಮ ಸ್ವಚ್ಛತಾ ಕಾರ್ಮಿಕರೇ ನಮ್ಮ ಸ್ವಚ್ಛತಾ ನಾಯಕರು’ ಎಂಬ ಘೋಷವಾಕ್ಯದಡಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಸ್ಪರ್ಧೆ ನಡೆಯಲಿದೆ. ಜೂ.5ರಿಂದ 15ರ ಸಂಜೆ 4ರ ವರೆಗೆ ಸ್ಪರ್ಧೆಗಳಿಗೆ ಪ್ರವೇಶ ಕಲ್ಪಿಸಲಾಗಿದೆ.

ಪ್ರಬಂಧ ಸ್ಪರ್ಧೆ ವಿದ್ಯಾರ್ಥಿಗಳಿಗೆ ಮಾತ್ರ ( ವಿಷಯ: ಕಸ ಪ್ರತ್ಯೇಕಿಸುವಿಕೆ ಎಂದರೇನು? ಅದು ಯಾಕೆ ಮುಖ್ಯ?). 500 ಪದ ಪರಿಮಿತಿಯೊಳಗೆ ಇಂಗ್ಲಿಷ್/ಕನ್ನಡದಲ್ಲಿ ಲಿಖಿತ/ಟೈಪ್ ಮಾದರಿಯಲ್ಲಿ ಕಳುಹಿಸಬಹುದು.

ವಿಜೇತರನ್ನು ಘನತ್ಯಾಜ್ಯ ವಿಲೇವಾರಿಯ ವಿದ್ಯಾರ್ಥಿ ರಾಯಭಾರಿ-2021-22 ಎಂದು ಘೋಷಿಸಲಾಗುವುದು. ಪಾಲ್ಗೊಂಡವರಿಗೆ ಸ್ಟೂಡೆಂಟ್ ಮಾರ್ಷಲ್ಸ್ ಫಾರ್ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್-2021-2022 ಎನ್ನುವ ಇ-ಸರ್ಟೀಫಿಕೇಟ್ ನೀಡಲಾಗುವುದು.

ಫೊಟೊಸ್ಟೋರಿ ಸ್ಪರ್ಧೆ: ವಿಷಯ: 1. ಕಸ ಪ್ರತ್ಯೇಕಿಸುವುದು ಹೇಗೆ? 2. ನನ್ನ ಕಸ ನನ್ನ ಜವಾಬ್ದಾರಿ. 3 ಪ್ರತ್ಯೇಕಿಸದ ಕಸದಿಂದ ಆರೋಗ್ಯ ಕಾರ್ಯಕರ್ತರ ಬದುಕು.

ವಿಡಿಯೊ/ಡಾಕ್ಯುಮೆಂಟರಿ ಅಥವಾ ಕಿರುಚಿತ್ರ ಸ್ಪರ್ಧೆ( 1ರಿಂದ 3 ನಿಮಿಷ). ವಿಷಯ: 1. ಪ್ರತ್ಯೇಕಿಸದ ಕಸದಿಂದ ಹೇಗೆ ಪರಿಸರದ ಮೇಲೆ ಪರಿಣಾಮ ಉಂಟಾಗುತ್ತದೆ? 2. ಪ್ರತ್ಯೇಕಿಸದ ಕಸ ಹೇಗೆ ಸ್ವಚ್ಛತಾ ಕಾರ್ಮಿಕರ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ? 3. ಪ್ರತ್ಯೇಕಿಸದ ಕಸದಿಂದ ಆರೋಗ್ಯ ಕಾರ್ಯಕರ್ತರ ಬದುಕು.

ಗೂಗಲ್ ಫಾರ್ಮ್ (https://forms.gle/qbWFsBgMoNeTF8Fs9) ಮೂಲಕ ಆಸಕ್ತರು ಫೋನ್ ನಂಬ್ರ ಸಹಿತ ಹೆಸರು ನೋಂದಣಿ ಮಾಡಿಕೊಳ್ಳಬಹುದು.  ಇಮೇಲ್:  mccmangaluru@gmail.com ಹೆಚ್ಚಿನ ಮಾಹಿತಿಗೆ ಮೊ.ಸಂ: 94498 41153/7892097407ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News