×
Ad

ಜೂನ್‌ 10ರಂದು ಕಂಕಣ ಸೂರ್ಯಗ್ರಹಣ: ಭಾರತದಲ್ಲಿ ಗೋಚರವಿಲ್ಲ

Update: 2021-06-05 22:02 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.6: ಈ ವರ್ಷದ ಪ್ರಪ್ರಥಮ ಸೂರ್ಯಗ್ರಹಣವು ಜೂನ್ 10ರಂದು ನಡೆಯಲಿದೆ. ಭಾರತೀಯ ಕಾಲಮಾನ 01.42 ರ ಮಧ್ಯಾಹ್ನ ಸೂರ್ಯಗ್ರಹಣ ಆರಂಭಗೊಳ್ಳಲಿದ್ದು, ಸಂಜೆ 6:41ಕ್ಕೆ ಅಂತ್ಯವಾಗಲಿದೆ. ಸೂರ್ಯನ ಸುತ್ತಲೂ ಬೆಳಕಿನ ಉಂಗುರಾಕೃತಿ ಏರ್ಪಡುವುದರಿಂದ ಇದನ್ನು ಕಂಕಣ ಸೂರ್ಯಗ್ರಹಣವೆಂದೂ ಕರೆಯಲಾಗುತ್ತಿದೆ.

ಚಂದ್ರನು ಭೂಮಿಯ ಅಂತರ ತೀರಾ ದೂರದಲ್ಲಿದ್ದಾಗ ಕಂಕಣ ಸೂರ್ಯಗ್ರಹವುಂಟಾಗುತ್ತದೆ. ದೀರ್ಘವಾದ ದೂರದಿಂದಾಗಿ ಚಂದ್ರನ ನೆರಳು ಸೂರ್ಯನನ್ನು ಪೂರ್ತಿಯಾಗಿ ಆವರಿಸುವುದಿಲ್ಲ. ಹೀಗಾಗಿ ಸೂರ್ಯನ ಮೇಲ್ಮೈಯಲ್ಲಿ ಬೆಳಕಿನ ಉಂಗುರ ಸೃಷ್ಟಿಯಾಗುತ್ತದೆ. ಈ ಕಂಕಣ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲ. 

ಅಮೆರಿಕದ ಈಶಾನ್ಯಭಾಗ ಹಾಗೂ ಕೆನಡಾದ ಪೂರ್ವ ಭಾಗಗಳಲ್ಲಿ ಗ್ರಹಣ ಕಾಣಸಿಗಲಿದೆ. ಕೆನಡಾದ ಉತ್ತರ ಒಂಟಾರಿಯೋ ಹಾಗೂ ಕ್ಯುಬೆಕ್ ಸಣ್ಣ ಭಾಗಗಳಲ್ಲಿಯೂ ಗ್ರಹಣ ವೀಕ್ಷಿಸಬಹುದಾಗಿದೆ. ಯುರೋಪ್ನ ಸ್ಪೇನ್, ಜರ್ಮನಿ, ಬ್ರಿಟನ್, ಫ್ರಾನ್ಸ್ ಹಾಗೂ ಸ್ಕಾಂಡಿನೇವಿಯಾದಲ್ಲೂ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News