×
Ad

ಮಕ್ಕಳ ಮೇಲಿನ ಕೋವ್ಯಾಕ್ಸಿನ್ ಪ್ರಯೋಗಕ್ಕೆ ತಪಾಸಣೆ ಆರಂಭ

Update: 2021-06-07 12:44 IST

ಹೊಸದಿಲ್ಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಪ್ರಯೋಗಕ್ಕಾಗಿ 2ರಿಂದ 18 ವರ್ಷದೊಳಗಿನ ಮಕ್ಕಳ ತಪಾಸಣೆ ದಿಲ್ಲಿಯ ಏಮ್ಸ್ ನಲ್ಲಿ ಸೋಮವಾರ ಆರಂಭವಾಗಿದೆ

ಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿರುವ ಈ ಲಸಿಕೆ ಮಕ್ಕಳಿಗೆ ಸೂಕ್ತವೇ ಎಂಬುದನ್ನು ಪರಿಶೀಲಿಸಲು ಪಾಟ್ನಾದ ಏಮ್ಸ್ ನಲ್ಲಿ ಈಗಾಗಲೇ ಪ್ರಯೋಗ ನಡೆಸಲಾಗಿದೆ.

ಸದ್ಯ ದಿಲ್ಲಿಯ ಏಮ್ಸ್ ನಲ್ಲಿ ನಡೆಯಲಿರುವ ಪ್ರಯೋಗಕ್ಕೆ ಮಕ್ಕಳ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆ ನಂತರ ಅವರಿಗೆ ಲಸಿಕೆ ನೀಡಲಾಗುತ್ತದೆ.

525 ಆರೋಗ್ಯವಂತ ಸ್ವಯಂ ಸೇವಕರ ಮೇಲೆ ಈ ಪ್ರಯೋಗ ನಡೆಯಲಿದೆ. ಪ್ರಯೋಗದಲ್ಲಿ 28 ದಿನಗಳ  ಅಂತರದಲ್ಲಿ ಎರಡು ಡೋಸ್ ಗಳನ್ನು ಇಂಟ್ರಾಮಸ್ಕುಲರ್ ಮೂಲಕ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News