×
Ad

ಲಾಕ್‌ ಡೌನ್ ನಿಯಮ ಉಲ್ಲಂಘನೆ: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2,410 ವಾಹನಗಳ ಜಪ್ತಿ

Update: 2021-06-07 13:15 IST
ಎನ್. ಶಶಿಕುಮಾರ್

ಮಂಗಳೂರು, ಜೂ. 7: ಕೊರೋನ ಎರಡನೆ ಅಲೆಯ ಸಂದರ್ಭ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋವಿಡ್ ಲಾಕ್‌ ಡೌನ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಈವರೆಗೆ 2,410 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇದೇ ವೇಳೆ ಮಾಸ್ಕ್ ಧರಿಸದ ಕುರಿತಂತೆ 13,578 ಪ್ರಕರಣಗಳು ದಾಖಲಾಗಿದ್ದು, ಸುರಕ್ಷಿತ ಅಂತರಕ್ಕೆ ಸಂಬಂಧಿಸಿ 91, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ 253 ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 286 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಕೊರೋನ 2ನೆ ಅವಧಿಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 92 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೋಂಕಿಗೆ ಒಳಗಾಗಿದ್ದು, ಪ್ರಸ್ತುತ 22 ಸಕ್ರಿಯ ಪ್ರಕರಣಗಳಿವೆ. ಲಾಕ್‌ ಡೌನ್ ಸಂದರ್ಭ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸಿ ಕೊರೋನ ನಿಯಂತ್ರಣದಲ್ಲಿ ಸಹಕಾರ ನೀಡುವಂತೆಯೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News