ಕುಕ್ಕೆಹಳ್ಳಿ: ಸರಕಾರಿ ಜಮೀನು ಅತಿಕ್ರಮಿಸಿದವರ ವಿರುದ್ಧ ಕಠಿಣ ಕ್ರಮ -ಅಪರ ಜಿಲ್ಲಾಧಿಕಾರಿ
ಉಡುಪಿ, ಜೂ.7: ಕೋವಿಡ್-19ರ ಸಂದರ್ಭದ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಸರಕಾರಿ ಜಮೀನನ್ನು ಅತಿಕ್ರಮಿ ಸುವ ಕ್ರಮ ಕಾನೂನಿಗೆ ವಿರುದ್ಧವಾಗಿದ್ದು, ಇಂಥವರ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಎಚ್ಚರಿಸಿದ್ದಾರೆ.
ಇತ್ತೀಚೆಗೆ ಅಪರ ಜಿಲ್ಲಾಧಿಕಾರಿ ಪ್ರಭು ಅವರು ಉಡುಪಿ ತಹಶೀಲ್ದಾರ್ ರೊಂದಿಗೆ ಕುಕ್ಕೆಹಳ್ಳಿ ಗ್ರಾಮಕ್ಕೆ ಕೋವಿಡ್-19ರ ಸ್ಥಿತಿ ಗತಿಯ ಪರಿಶೀಲನೆಗಾಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಪಂ ಹಾಗೂ ಗ್ರಾಮಕರಣಿಕರ ಕಚೇರಿಯ ಪಕ್ಕದಲ್ಲಿ ಉಡುಪಿ ಕೊಳಲ ಗಿರಿ-ಪೆರ್ಡೂರು ಪಿಡಿಬ್ಲು ರಸ್ತೆಗೆ ಹೊಂದಿ ಕೊಂಡಿರುವ ಸರಕಾರಕ್ಕೆ ಸೇರಿದ ಸರ್ವೆ ನಂಬರ್ 127ರಲ್ಲಿ ಅನಧಿಕೃತ ಅತಿಕ್ರಮಣ ನಡೆದಿರುವುದನ್ನು ಗಮನಿಸಿದ್ದರು.
ಈ ಜಮೀನಿನಲ್ಲಿದ್ದ ಬೆಲೆಬಾಳುವ ಮರಮಟ್ಟುಗಳನ್ನು ನೆಲಸಮ ಮಾಡಿ, ಬೆಲೆಬಾಳುವ ಸರಕಾರಿ ಜಮೀನನ್ನು ಕಬಳಿಸಿರುವುದು ಸದಾಶಿವ ಪ್ರಭು ಅವರ ಗಮನಕ್ಕೆ ಬಂತು. ಕೂಡಲೇ ಈ ಅತಿಕ್ರಮಣವನ್ನು ತೆರವುಗೊಳಿಸಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅವರು ತಹಶೀಲ್ದಾರ್ ಹಾಗೂ ಗ್ರಾಮ ಕರಣಿಕರಿಗೆ ನಿರ್ದೇಶನ ನೀಡಿದರು.
ಕೋವಿಡ್-19ರ ಲಾಕ್‌ಡೌನ್‌ನ ಪರಿಸ್ಥಿತಿಯನ್ನು ದುರುಪಯೋಗಪಡಿಸಿ ಕೊಂಡು ಸರಕಾರಿ ಜಮೀನನ್ನು ಅತಿಕ್ರಮಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು ಎಂದವರು ಎಚ್ಚರಿಸಿದರು.
ಬಳಿಕ ಅಪರ ಜಿಲ್ಲಾಧಿಕಾರಿಗಳು ಕುಕ್ಕೆಹಳ್ಳಿ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕಟ್ಟಡದ ಮೇಲ್ಚಾವಣಿ ಮಳೆಗಾಲದಲ್ಲಿ ಸೋರುತಿದ್ದು, ಮಳೆ ನೀರಿನಿಂದ ಔಷಧಿ ಸಾಮಾಗ್ರಿಗಳು ಹಾನಿಯಾಗುತ್ತಿರು ವುದನ್ನು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಎಸ್‌ಡಿಆರ್‌ಎಫ್ ನಿಧಿಯಿಂದ ಕಾಮಗಾರಿ ಕೈಗೆತ್ತಿಕೊ ಳ್ಳುವಂತೆ ಅವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.