ಅಪರಿಚಿತ ಮೃತದೇಹ ಪತ್ತೆ
Update: 2021-06-07 20:17 IST
ಮಂಗಳೂರು, ಜೂ.7: ನಗರದ ಬಲ್ಮಠ ನಾಯಕ್ಸ್ ಆಪ್ಟಿಕಲ್ಸ್ ಅಂಗಡಿಯ ಬಳಿಯ ಪುಟ್‌ಪಾತ್‌ನಲ್ಲಿ ಮೇ 31ರಂದು ಅಪರಾಹ್ನ 3:30ಕ್ಕೆ ಒಬ್ಬ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಸುಮಾರು 70 ವರ್ಷ ಪ್ರಾಯದ ಈ ವ್ಯಕ್ತಿಯು ಸಪೂರ ಮೈಕಟ್ಟು, ಕಪ್ಪುಮೈಬಣ್ಣ ಹಾಗೂ ಕೋಲು ಮುಖ ಹೊಂದಿದ್ದಾರೆ. ಗುಲಾಬಿ ಬಣ್ಣದ ಶರ್ಟ್, ಕಪ್ಪುಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ಚಹರೆಯುಳ್ಳ ಮೃತನ ಸಂಬಂಧಿಕರು ಅಥವಾ ವಾರಸುದಾರರು ಇದ್ದಲ್ಲಿ ಕದ್ರಿ ಪೊಲೀಸ್ ಠಾಣೆಯನ್ನು (ದೂ.ಸಂ: 0824-2220520) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.