×
Ad

ಡಿವೈಎಫ್‌ಐ ಕಸಬಾ ಬೆಂಗರೆ ಘಟಕ ಮನವಿ

Update: 2021-06-07 20:23 IST

ಮಂಗಳೂರು, ಜೂ.7: ಕಸಬಾ ಬೆಂಗರೆಯ ಹಲವು ಕಡೆ ಸರಿಯಾದ ಒಳ ಚರಂಡಿ ವ್ಯವಸ್ಥೆಗಳಿಲ್ಲದ ಕಾರಣ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ಅಲ್ಲದೆ ಅನೇಕ ಕಡೆ ದಾರಿದೀಪದ ಸಮಸ್ಯೆ ಇದೆ. ಹಾಗಾಗಿ ಈ ಎರಡೂ ಸಮಸ್ಯೆಗೆ ಪರಿಹಾರ ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್‌ಐ ಕಸಬಾ ಬೆಂಗರೆ ಘಟಕವು ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಈ ಸಂದರ್ಭ ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಬೆಂಗರೆ ಗ್ರಾಮ ಸಮಿತಿಯ ಅಧ್ಯಕ್ಷ ಹನೀಫ್ ಬೆಂಗರೆ, ಜಿಲ್ಲಾ ಸಮಿತಿ ಸದಸ್ಯ ನೌಶಾದ್ ಎ.ಬಿ., ಬಿಲಾಲ್ ಬಿ.ಎಂ.ಬಿ., ರಿಝ್ವಾನ್ ಬೆಂಗ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News