ಜೂನ್ 16 ರ ವರೆಗೆ ಲಾಕ್ ಡೌನ್ ವಿಸ್ತರಿಸಿದ ಕೇರಳ

Update: 2021-06-07 16:05 GMT

ತಿರುವನಂತಪುರ: ರಾಜ್ಯದಲ್ಲಿ 9,313 ಹೊಸ ಕೋವಿಡ್ -19 ಪ್ರಕರಣಗಳು ಹಾಗೂ  221 ಸಾವುಗಳು ವರದಿಯಾಗಿದ್ದು, ಕೇರಳ ಸರಕಾರ ಜೂನ್ 9 ರಂದು ಕೊನೆಗೊಳ್ಳಬೇಕಿದ್ದ ಲಾಕ್ ಡೌನ್ ಅನ್ನು ಜೂನ್ 16 ರವರೆಗೆ ವಿಸ್ತರಿಸಿದೆ.

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಹೆಚ್ಚಿನ ಪರೀಕ್ಷಾ ಪಾಸಿಟಿವಿಟಿ ರೇಟ್ ಅನ್ನು ಪರಿಗಣಿಸಿ ಜೂನ್ 16 ರವರೆಗೆ ಲಾಕ್‌ಡೌನ್ ವಿಸ್ತರಿಸಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಜೂನ್ 12 ಹಾಗೂ 13 ರಂದು ನಿರ್ಬಂಧಗಳು "ತೀವ್ರ" (ಒಟ್ಟು ಲಾಕ್ ಡೌನ್) ಆಗಲಿವೆ ಎಂದು ಸಿಎಂ ಕಚೇರಿ ತಿಳಿಸಿದೆ. ಸರಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳು ಜೂನ್ 17 ರಿಂದ 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಸಿಎಂಒ ತಿಳಿಸಿದೆ.

ಕೊರೋನವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆಯಾದ ನಂತರ ಮೇ 8 ರಿಂದ ಕೇರಳವು ಲಾಕ್ ಡೌನ್ ಆಗಿದೆ. ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಮೇ 16, ಮೇ 23 ಹಾಗೂ  ಮೇ 31 ರಂದು ಸರಕಾರವು ರಾಜ್ಯವ್ಯಾಪಿ ಸ್ಥಗಿತಗೊಳಿಸುವಿಕೆಯನ್ನು ಮೂರು ಬಾರಿ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News