ಯಡಮೊಗೆ ಕೊಲೆ ಪ್ರಕರಣದಲ್ಲಿ ಹಸ್ತಕ್ಷೇಪ ಆಗಿಲ್ಲ: ಸಂಸದ ಬಿವೈ ರಾಘವೇಂದ್ರ
Update: 2021-06-07 21:37 IST
ಕುಂದಾಪುರ, ಜೂ.7: ಯಡಮೊಗೆ ಕೊಲೆ ಪ್ರಕರಣ ತನಿಖೆಯ ಹಂತದಲ್ಲಿ ಇರುವುದರಿಂದ ಆರೋಪ ಹೊತ್ತಿರುವವರು ಎಲ್ಲಿ ಸಿಕ್ಕಿ ದ್ದಾರೆ, ಏನು ಮಾಡುತ್ತಿ ದ್ದಾರೆ ಎಂಬುದಕ್ಕಿಂತ ಉದಯ್ ಕುಟುಂಬಕ್ಕೆ ನ್ಯಾಯ ಸಿಗುವುದು ಮುಖ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಹೆಮ್ಮಾಡಿಯಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತರಾದ ವ್ಯಕ್ತಿ ನಮ್ಮ ಪಕ್ಷದ ಕಾರ್ಯ ಕರ್ತರು. ಕೊಲೆ ಆರೋಪವೂ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಬಂದಿದೆ. ಯಾವುದೇ ಭಯ, ಹಿಂಜರಿಕೆ ಇಟ್ಟುಕೊಳ್ಳದೆ ಯಾರು ತಪ್ಪು ಮಾಡಿದ್ದಾರೆಯೋ ಅವರು ಒಪ್ಪಿಕೊಳ್ಳಲೇಬೇಕು. ಪ್ರಕರಣ ತನಿಖೆಯ ಹಂತದಲ್ಲಿ ಇದೆ. ಯಾರಿಂದಲೂ ರಾಜಕೀಯ ಹಸತಿಕ್ಷೇಪ ಗಳು ಆಗಿಲ್ಲ ಎಂದರು.