ಲಸಿಕಾ ಕೇಂದ್ರದ ನೋಡೆಲ್ ಅಧಿಕಾರಿ ಬದಲಾವಣೆ
Update: 2021-06-07 21:56 IST
ಉಡುಪಿ, ಜೂ.7: ಮಲ್ಪೆಯ ಗಾಂಧಿ ಶತಾಬ್ಧಿ ಲಸಿಕಾ ಕೇಂದ್ರಕ್ಕೆ ನೇಮಕ ಮಾಡಲಾದ ನೋಡೆಲ್ ಅಧಿಕಾರಿಯನ್ನು ಬದಲಾಯಿಸಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಫಾಯಲ್ ಪಿ (ಮೊ.ನಂ: 9620919272, 8655132438) ಇವರನ್ನು ನೇಮಕ ಮಾಡಿ ಹಾಗೂ ಹೊಸದಾಗಿ ಪ್ರಾರಂಭವಾಗುವ ಕುಕ್ಕಿಕಟ್ಟೆ ಇಂದಿರಾ ನಗರದ ಸರಕಾರಿ ಪ್ರೌಢಶಾಲೆಯ ಲಸಿಕಾ ಕೇಂದ್ರಕ್ಕೆ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕಾ ನಿರ್ದೇಶಕ ಗುರುಪ್ರಸಾದ್ (ಮೊ.ನಂ: 9900910948 ಅವರನ್ನು ನೇಮಕ ಮಾಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.