ಜೂ.12,13 ಸಮಸ್ತ ಮದ್ರಸ ‘ಆನ್‌ಲೈನ್’ ಸ್ಪೆಷಲ್ ಪರೀಕ್ಷೆ

Update: 2021-06-07 17:31 GMT

ಚೇಳಾರಿ, ಜೂ.7: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ದೇಶ-ವಿದೇಶದಲ್ಲಿ ಎಪ್ರಿಲ್ ಮೊದಲ ವಾರ ನಡೆಸಲಾದ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ‘ಸೇ’ ಪರೀಕ್ಷೆ ಹಾಗೂ ಕೋವಿಡ್-19 ಕಾರಣ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಜೂ.12,13ರಂದು ‘ಸ್ಪೆಷಲ್ ಆನ್‌ಲೈನ್ ಪರೀಕ್ಷೆ’ಯನ್ನು ನಡೆಸಲಿದೆ.

ಪರೀಕ್ಷಾ ವೇಳಾಪಟ್ಟಿ

ಜೂ.12ರಂದು ಭಾರತೀಯ ಸಮಯ ಬೆಳಗ್ಗೆ 10ರಿಂದ 11 ಗಂಟೆಯ ತನಕ 5ನೇ ತರಗತಿ - ಫಿಖ್ಹ್, ಏಳನೇ ತರಗತಿ- ಲಿಸಾನುಲ್ ಕುರ್‌ಆನ್, ಹತ್ತನೇ ತರಗತಿ-ದುರೂಸುಲ್ ಇಹ್ಸಾನ್, ಪ್ಲಸ್ ಟು ತರಗತಿ-ತಫ್ಸೀರ್, ಪೂ.11:30ರಿಂದ 12:30ರ ತನಕ 5ನೇ ತರಗತಿ-ಲಿಸಾನುಲ್ ಕುರ್‌ಆನ್-ತಜ್ವೀದ್, ಏಳನೇ ತರಗತಿ - ತಾರೀಖ್, ಹತ್ತನೇ ತರಗತಿ- ಫಿಖ್ಹ್, ಪ್ಲಸ್ ಟು ತರಗತಿ ದುರೂಸುಲ್ ಇಹ್ಸಾನ್.

ಜೂ.13ರಂದು ಭಾರತೀಯ ಸಮಯ ಬೆಳಗ್ಗೆ 10ರಿಂದ 11ರ ತನಕ ಐದನೇ ತರಗತಿ-ಅಖೀದ, ಏಳನೇ ತರಗತಿ-ಫಿಖ್ಹ್, ಹತ್ತನೇ ತರಗತಿ- ತಫ್ಸೀರ್, ಪ್ಲಸ್ ಟು ತರಗತಿ-ಲಿಸಾನುಲ್ ಕುರ್‌ಆನ್, ಪೂ.11:30ರಿಂದ 12:30 ತನಕ 5ನೇ ತರಗತಿ- ತಾರೀಖ್ ಅಖ್ಲಾಕ್, ಏಳನೇ ತರಗತಿ- ದುರೂಸುಲ್ ಇಹ್ಸಾನ್, ಹತ್ತನೇ ತರಗತಿ-ಲಿಸಾನುಲ್ ಕುರ್‌ಆನ್, ಪ್ಲಸ್ ಟು ತರಗತಿ-ಫಿಖ್ಹ್.

ಕುರ್‌ಆನ್ ಪರೀಕ್ಷೆ

ಜೂ.13ರ ಮಧ್ಯಾಹ್ನ ಎರಡು ಗಂಟೆಗೆ ಮದ್ರಸ ಸದರ್ ಮುಅಲ್ಲಿಂ ಅಥವಾ ಸದರ್ ಮುಅಲ್ಲಿಂ ನಿಯೋಜಿಸಿದ ಮುಅಲ್ಲಿಂ ವಾಟ್ಸ್‌ಆ್ಯಪ್, ಗೂಗಲ್ ಮೀಟ್, ಟೆಲಿಗ್ರಾಂ ಮೊದಲಾದ ಸೋಶಿಯಲ್ ಮೀಡಿಯಾ ಉಪಯೋಗಪಡಿಸಿ ಕುರ್‌ಆನ್ ಪರೀಕ್ಷೆ ನಡೆಸಿ ಮದ್ರಸ ಸಮಿತಿಯ ಕಾಗದದಲ್ಲಿ ವಿದ್ಯಾರ್ಥಿಯ ರಿಜಿಸ್ಟರ್ ನಂಬರ್, ಹೆಸರು, ತರಗತಿ, ಅಂಕ ಮೊದಲಾದವುಗಳನ್ನು ದಾಖಲಿಸಿ ಸದರ್ ಮುಅಲ್ಲಿಂ ದೃಢೀಕರಿಸಿ ಜೂ.15ರೊಳಗೆ ಮೊ.ಸಂ: 9658600900ಕ್ಕೆ ವಾಟ್ಸ್‌ಆ್ಯಪ್  ಪಿಡಿಎಫ್ ಫೈಲ್  ಮಾಡಬೇಕು. ’ಸೇ’ ಪರೀಕ್ಷೆಗೆ ರಿಜಿಸ್ಟರ್ ಮಾಡಿದ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡ ವಿಷಯದ ಸಮಯದಲ್ಲಿ ಮಾತ್ರ ಪರೀಕ್ಷೆಗೆ ಹಾಜರಾಗಬೇಕು ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News