ದಕ್ಷಿಣ ದಾರ್ಫುರ್ನಲ್ಲಿ ಘರ್ಷಣೆ: ಕನಿಷ್ಠ 36 ಸಾವು

Update: 2021-06-07 17:35 GMT

ಖಾರ್ತೂಮ್ (ಸುಡಾನ್), ಜೂ. 7: ಸುಡಾನ್ನ ದಕ್ಷಿಣ ದಾರ್ಫುರ್ ವಲಯದಲ್ಲಿ ಅರಬ್ ಮತ್ತು ಅರಬೇತರ ಬುಡಕಟ್ಟುಗಳ ಜನರ ನಡುವೆ ವಾರಾಂತ್ಯದಲ್ಲಿ ಸಂಭವಿಸಿದ ಸಂಂಘರ್ಷದಲ್ಲಿ ಕನಿಷ್ಠ 36 ಮಂದಿ ಮೃತಪಟ್ಟಿದ್ದಾರೆ.

ದಕ್ಷಿಣ ದಾರ್ಫುರ್ನ ಉಮ್ ದಫುಕ್ ಎಂಬಲ್ಲಿ ಅರಬ್ ತೈಶ ಮತ್ತು ಆಫ್ರಿಕನ್ ಫಲ್ಲಾಟ ಬುಡಕಟ್ಟುಗಳ ನಡುವೆ ಶನಿವಾರ ಸಂಘರ್ಷ ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸೋಮವಾರದ ವೇಳೆಗೆ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ಸುಡಾನ್ನ ಅಧಿಕೃತ ಸುದ್ದಿ ಸಂಸ್ಥೆ ಎಸ್ಯುಎನ್ಎ ಹೇಳಿದೆ.
‘‘ಬುಡಕಟ್ಟು ಪಂಗಡಗಳ ನಡುವಿನ ಘರ್ಷಣೆಯನ್ನು ನಿಲ್ಲಿಸಲು ಸೇನಾ ಪಡೆಗಳನ್ನು ಸಂಘರ್ಷಪೀಡಿತ ಸ್ಥಳಗಳಲ್ಲಿ ನಿಯೋಜಿಸಲಾಯಿತು. ಘರ್ಷಣೆಯಲ್ಲಿ 36 ಮಂದಿ ಮೃತಪಟ್ಟಿದ್ದಾರೆ ಮತ್ತು 32 ಮಂದಿ ಗಾಯಗೊಂಡಿದ್ದಾರೆ’’ ಎಂದು ದಕ್ಷಿಣ ದಾರ್ಫುರ್ ಅಧಿಕಾರಿಗಳನ್ನು ಉಲ್ಲೇಖಿಸಿ ಎಸ್ಯುಎನ್ಎ ರವಿವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News