×
Ad

ಬಂದರ್ ದಕ್ಕೆಯಲ್ಲಿ ‘ಬ್ರೇಕ್ ದಿ ಚೈನ್’ ಕಾರ್ಯಕ್ರಮ

Update: 2021-06-07 23:05 IST

ಮಂಗಳೂರು, ಜೂ.7: ದ.ಕ. ಜಿಲ್ಲಾ ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ್ ವತಿಯಿಂದ ಮಾಜಿ ಶಾಸಕ ಐವನ್ ಡಿಸೋಜರ ನೇತೃತ್ವ ದಲ್ಲಿ ಕೊರೋನ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ‘ಬ್ರೇಕ್ ದಿ ಚೈನ್’ ಜನಾಂದೋಲನ ಕಾರ್ಯಕ್ರಮವು ನಗರದ ಬಂದರ್ ದಕ್ಕೆಯಲ್ಲಿ ಸೋಮವಾರ ನಡೆಯಿತು.

ಗೂಡಾಂಗಡಿ, ತಳ್ಳುವ ಗಾಡಿ, ಮೀನುಗಾರಿಕಾ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ ಸಹಿತ 250 ಮಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭ ಕೊರೋನ ರೋಗ ಹೇಗೆ ಹರಡುತ್ತದೆ ಎಂಬುವುದನ್ನು ನಾಟಕ ರೂಪದಲ್ಲಿ ತೋರಿಸಲಾಯಿತು.

ಕಾರ್ಯಕ್ರಮದಲ್ಲಿ ಅಶಿತ್ ಪಿರೇರಾ, ಸರ್ಫರಾಜ್,ಮೀನು ಮಾರಾಟಗಾರರ ಸಂಘದ ಸದಸ್ಯ ಕಾವುಂಞಾಕ, ಸಿ.ಎಂ.ಮುಸ್ತಫ, ಆರೀಫ್ ಬಾವ, ಇಮ್ರಾನ್, ಯೂಸೂಫ್ ಉಚ್ಛಿಲ್, ಹಸನ್ ಡೀಲ್ಸ್, ಹಬೀಬುಲ್ಲ ಕಣ್ಣೂರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News