ಕಂಚಿನಡ್ಕದಲ್ಲಿ ಕಿಟ್ ವಿತರಣೆ

Update: 2021-06-07 17:46 GMT

ಪಡುಬಿದ್ರಿ: ಕೋವಿಡ್ ನಿಂದ ಜನರು ಕಂಗಾಲಾಗಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಡೊಂಬರಾಟ ನಡೆಸುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಅವರು ಸೋಮವಾರ ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್. ಶಫಿ ನೇತೃತ್ವದಲ್ಲಿ ಸುಮಾರು 750 ಮಂದಿಗೆ ದಿನಬಳಕೆ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.

ಬಿಜೆಪಿಯಲ್ಲಿ ಜನರ ಬಗ್ಗೆ ಕಾಳಜಿ ಇಲ್ಲ. ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನರ ಸಹಾಯಕ್ಕೆ ಬರಬೇಕಾದ ಸರ್ಕಾರ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ನಡೆಸುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರಕ್ಕಿಂತ ಕೇರಳದ ಸರ್ಕಾರ ಜನರಿಗೆ ಉತ್ತಮ ರೀತಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದೆ ಎಂದು ನುಡಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ವೈ. ಸುಕುಮಾರ್, ಅಲ್ಪಸಂಖ್ಯಾತ ಮೋರ್ಚಾ ಕಾಪು ಬ್ಲಾಕ್ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಯುವ ಕಾಂಗ್ರೆಸ್ ಕಾಪು ಬ್ಲಾಕ್ ಅಧ್ಯಕ್ಷ ರಮೀಝ್ ಹುಸೈನ್, ಪಡುಬಿದ್ರಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಕರುಣಾಕರ ಪೂಜಾರಿ,  ಗ್ರಾಮ ಪಂ. ಸದಸ್ಯರಾದ ಎಂ.ಎಸ್. ಶಫಿ, ನವೀನ್ ಎನ್. ಶೆಟ್ಟಿ, ಗಣೇಶ್ ಕೋಟ್ಯಾನ್, ನಿಯಾಝ್, ಜ್ಯೋತಿ ಮೆನನ್, ಹರೀಶ್ ಸೌಂಡ್ಸ್ ಕಂಚಿನಡ್ಕ, ರಮೇಶ್, ಎಂ.ಎಸ್. ನಿಝಾಮ್, ಅಶ್ವತ್ ಪಾದೆಬೆಟ್ಟು, ಅಬ್ದುಲ್ ರಹ್ಮಾನ್ ಕಂಚಿನಡ್ಕ, ಎ.ಎಚ್. ಖಾದರ್ ಹಾಜಿ ಉಪಸ್ಥಿತರಿದ್ದರು. 

ಕಂಚಿನಡ್ಕ, ಪಡುಬಿದ್ರಿ ಸಹಿತ ಸುಮಾರು ಮೊದಲ ಹಂತದಲ್ಲಿ 400, ಎರಡನೇ ಹಂತದಲ್ಲಿ 200, ಮೂರನೇ ಹಂತದಲ್ಲಿ 150 ಕಿಟ್ ವಿತರಣೆ ನಡೆಯಲಿದೆ. ಕಿಟ್‍ನಲ್ಲಿ ದಿನಬಳಕೆ ಜಿನಸಿ ಸಾಮಾಗ್ರಿಗಳು, ತರಕಾರಿಗಳನ್ನು ವಿತರಿಸಲಾಯಿತು. 

ಬಿಜೆಪ ಸೇರ್ಪಡೆ: ಬಿಜೆಪಿ ಕಾರ್ಯಕರ್ತರಾದ ಹರೀಶ್ ಸೌಂಡ್ಸ್ ಕಂಚಿನಡ್, ರಮೇಶ್ ಕಂಚಿನಡ್ಕ, ಅಶ್ವತ್ ಪಾದೆಬೆಟ್ಟು ಮುಂತಾದವರು ಕಾಂಗ್ರೆಸ್ ಸೇರ್ಪಡೆಗೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News