ಮಂಗಳೂರು : ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಲಸಿಕಾ ಕಾರ್ಯಕ್ರಮ

Update: 2021-06-08 07:09 GMT

ಮಂಗಳೂರು : ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಜಸ್ಟಿಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಸಹಯೋಗದೊಂದಿಗೆ ಕ್ಲಾಸಿಕ್ ರೂಬಿ ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಕ್ಲಾಸಿಕ್ ರೂಬಿ ಅಪಾರ್ಟ್‍ಮೆಂಟ್ ಸಂಘದ ಅಧ್ಯಕ್ಷರಾದ ಡಾ. ಕೆ.ಸಿ ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ಉತ್ಸುಕರಾಗಿ ಬಂದಿರುವ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು. ಲಸಿಕೆಯನ್ನು ತೆಗೆದುಕೊಳ್ಳುವುದರ ಬಗ್ಗೆ ಯಾರೂ ಭಯ ಪಡುವ ಅವಶ್ಯಕತೆಯಿಲ್ಲ. ಲಸಿಕೆ ಪಡೆಯುವುದರಿಂದ ನಾವು ಹಾಗೂ ನಮ್ಮ ಸುತ್ತ ಮುತ್ತಲಿನ ಜನರನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನಾನು ಸಹ ಈಗಾಗಲೇ ಎರಡು ಲಸಿಕೆಯನ್ನು ಪಡೆದು ಸುರಕ್ಷಿತವಾಗಿದ್ದೇನೆ. ಸಮಾಜದಲ್ಲಿ ಇತರರನ್ನು ಜಾಗೃತಿ ಮಾಡುವುದರ ಮೂಲಕ ಎಲ್ಲರೂ ಲಸಿಕೆಯನ್ನು ಪಡೆಯಬೇಕೆಂದು ಕರೆ ನೀಡಿದರು. ಅಪಾರ್ಟ್‍ಮೆಂಟ್‍ನ ನಿವಾಸಿಗಳಿಗೆ ಲಸಿಕೆ ಕಾರ್ಯಮವನ್ನು ಆಯೋಜಿಸಿರುವ ಜಸ್ಟಿಸ್ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಲಾಸಿಕ್ ರೂಬಿ ಅಪಾಟ್‍ಮೆಂಟ್ ಅಸೋಸಿಯೇಶನ್ ಕಾರ್ಯದರ್ಶಿ ರಮೇಶ್ ಕೆ. ಸಹಕಾರ್ಯದರ್ಶಿ ದೀಪಕ್‍ ರಾಜ್, ಸದಸ್ಯೆ ದೀಪಿಕಾ ರೈ, ಶಿವಪ್ರಸಾದ್, ರೋಹನ್ ಶೆಟ್ಟಿ, ಸತೀಶ ಸುವರ್ಣ, ವೈದ್ಯರಾದ ಡಾ. ಅನುಷಾ ಶೆಟ್ಟಿ, ಡಾ. ಲಾವನ್ಯ, ಡಾ. ನಂದಿತಾ, ಡಾ ನೇಹಾ, ಡಾ. ನಂದನಾ, ಡಾ. ಪ್ರೀತಿಕಾ, ತೇಜ ಮತ್ತು ಮೇಘನಾ ಶಕ್ತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮತ್, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News