ಬೃಹತ್‌ ಇಂಟರ್ನೆಟ್‌ ವ್ಯತ್ಯಯ: ವಿಶ್ವದ ಪ್ರಮುಖ ವೆಬ್‌ ಸೈಟ್‌ ಗಳಲ್ಲಿ ಸಮಸ್ಯೆ

Update: 2021-06-08 16:21 GMT

ವಾಶಿಂಗ್ಟನ್, ಜೂ. 8: ಇ-ಕಾಮರ್ಸ್ ಕಂಪೆನಿ ಅಮೆಝಾನ್ ಮತ್ತು ಫೈನಾನ್ಶಿಯಲ್ ಟೈಮ್ಸ್, ನ್ಯೂಯಾರ್ಕ್ ಟೈಮ್ಸ್, ಗಾರ್ಡಿಯನ್ ಮತ್ತು ಬ್ಲೂಮ್ಬರ್ಗ್ ನ್ಯೂಸ್ ಮುಂತಾದ ಪ್ರಮುಖ ಸುದ್ದಿ ವೆಬ್ಸೈಟ್ಗಳು ಸೇರಿದಂತೆ ಜಗತ್ತಿನಾದ್ಯಂತದ ಹಲವಾರು ವೆಬ್ ಸೈಟ್ಗಳ ಸೇವೆಯಲ್ಲಿ ಮಂಗಳವಾರ ಅಪರಾಹ್ನ ವ್ಯತ್ಯಯ ಉಂಟಾಗಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಮಿಯೊ, ಕೋರ ಮತ್ತು ರೆಡಿಟ್ ಮುಂತಾದ ಜನಪ್ರಿಯ ವೆಬ್ಸೈಟ್ಗಳ ಸೇವೆಯಲ್ಲಿಯೂ ವ್ಯತ್ಯಯ ತಲೆದೋರಿದೆ.

ಹಲವಾರು ವೆಬ್ಸೈಟ್ಗಳ ಬಳಕೆದಾರರು ಅಡಚಣೆ ಎದುರಿಸಿದ್ದಾರೆ ಎನ್ನುವುದನ್ನು ವೆಬ್ಸೈಟ್ಗಳ ಸೇವೆಯಲ್ಲಿ ವ್ಯತ್ಯಯವನ್ನು ಪತ್ತೆಹಚ್ಚುವ ವೆಬ್ಸೈಟ್ ‘ಡೌನ್ಡಿಟೆಕ್ಟರ್’ ತೋರಿಸಿದೆ.
ಕಂಟೆಂಟ್ ಡೆಲಿವರಿ ನೆಟ್ವರ್ಕ್ (ಸಿಡಿಎನ್ ಪ್ರೊವೈಡರ್) ‘ಫಾಸ್ಟ್ಲಿ’ಯಲ್ಲಿ ಈ ಮೊದಲು ತಲೆದೋರಿದ ದೋಷವೇ ಈ ವ್ಯತ್ಯಯಕ್ಕೆ ಕಾರಣವಾಗಿರಬಹುದು ಎಂದು ಟೆಕ್ಕ್ರಂಚ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News