ಎಒಎಂಎಸ್‌ಐನಿಂದ ಯುಕೆ ಉತ್ಪಾದಿತ ಬ್ಲ್ಯಾಕ್ ಫಂಗಸ್ ಔಷಧ ಮಂಗಳೂರಿಗೆ
Update: 2021-06-08 17:49 IST
ಮಂಗಳೂರು, ಜೂ.9: ಬ್ಲ್ಯಾಕ್ ಫಂಗಸ್ ರೋಗಕ್ಕೆ ಔಷಧದ ಕೊರತೆ ಹಿನ್ನೆಲೆಯಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿಯವರ ವಿಶೇಷ ಪ್ರಯತ್ನದ ಫಲವಾಗಿ ಅಸೋಸಿಯೇಶನ್ ಆಫ್ ಓರಲ್ ಆ್ಯಂಡ್ ಮ್ಯಾಕ್ಸಿಲೋಫೇಶಿಯಲ್ ಸರ್ಜನ್ಸ್ ಆಫ್ ಇಂಡಿಯಾ ( ಎಒಎಂಎಸ್‌ಐ) ಸಂಘಟನೆಯ ಮಾಜಿ ಅಧ್ಯಕ್ಷರಾದ ಡಾ.ಕೃಷ್ಣಮೂರ್ತಿ ಬೊನತಾಯ ಹಾಗೂ ಡಾ.ಬದ್ರಿ ಅವರು ಯುನೈಟೆಡ್ ಕಿಂಗಡಂನಿಂದ ಬ್ಲ್ಯಾಕ್ ಫಂಗಸ್ ಗೆ ಬೇಕಾಗಿರುವ ಔಷಧವನ್ನು ಭಾರತಕ್ಕೆ ತರಿಸಿದ್ದಾರೆ.
ಅದನ್ನು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರಿಗೆ ಆ್ಯಂಫೋಟೆರಿಸಿನ್ ಔಷಧವನ್ನು ಮಂಗಳವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಎಒಎಂಎಸ್‌ಐ ಅಧ್ಯಕ್ಷರಾದ ಡಾ.ಮಂಜುನಾಥ ರೈ ಹಾಗೂ ಮಾಜಿ ಅಧ್ಯಕ್ಷರಾದ ಡಾ.ಮುಸ್ತಫಾ ಖಾದರ್ ಉಪಸ್ಥಿತರಿದ್ದರು.