ಮಾಹೆ ವಿವಿಯ ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ
ಮಣಿಪಾಲ, ಜೂ.8: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ತನ್ನೆಲ್ಲಾ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತ ಪಡಿಸಲು ಎಲ್ಲಾ ವಿದ್ಯಾ ಸಂಸ್ಥೆಗಳಿಗೆ ಸೇರಿದ ಸಮಸ್ತ ವಿದ್ಯಾರ್ಥಿಗಳಿಗೂ ಉಚಿತ ಲಸಿಕಾ ಶಿಬಿರ ನಡೆಸಲು ನಿರ್ಧರಿಸಿದೆ. ಈ ಮೂಲಕ ಮಾಹೆ ತನ್ನಲ್ಲಿ ಕಲಿಯುತ್ತಿ ರುವ 25,000 ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲು ಯೋಜನೆಯನ್ನು ರೂಪಿಸಿದೆ ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದರಿಂದ ಮಾಹೆಯ ಎಲ್ಲಾ ವಿದ್ಯಾರ್ಥಿಗಳು ಕೋವಿಡ್‌ಗಿರುವ ವ್ಯಾಕ್ಸಿನ್‌ನ್ನು ಸುಲಭವಾಗಿ ಪಡೆಯಲಿದ್ದು, ಈ ಮೂಲಕ ಕ್ಯಾಂಪಸ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತ ಪಡಿಸಲಿದೆ. ವಿದ್ಯಾರ್ಥಿಗಳ ವ್ಯಾಕ್ಸಿನೇಷನ್‌ನ ಸಂಪೂರ್ಣ ವೆಚ್ಚವನ್ನು ಮಾಹೆಯ ಆಡಳಿತ ಭರಿಸಲಿದೆ.
‘ನಮ್ಮೆಲ್ಲಾ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಷನ್ ಆಂದೋಲನವನ್ನು ಆಯೋಜಿಸಲು ನಮಗೆ ಹರ್ಷವೆನಿಸುತ್ತಿದೆ. ಸಮಸ್ತ ವಿದ್ಯಾರ್ಥಿಗಳ ಸುರಕ್ಷತೆ ಯನ್ನು ಖಚಿತ ಪಡಿಸುವಲ್ಲಿ ಮಾಹೆ ಯಾವತ್ತೂ ಮುಂಚೂಣಿಯಲ್ಲಿದೆ. ಮಾಹೆ ಮಟ್ಟಿೆ ಇದು ದೊಡ್ಡ ಮೈಲಿಗಲ್ಲು ಆಗಿದೆ. ಸರಕಾರದ ಎಲ್ಲಾ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ ನಾವು ಈ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ. ವೈರಸ್ ವಿರುದ್ಧದ ಹೋರಾಟ ದಲ್ಲಿ ಹಾಗೂ ಸೋಂಕಿನ ನಿಯಂತ್ರಣದಲ್ಲಿ ಪ್ರತಿಯೊಬ್ಬರೂ ಲಸಿಕೆಯನ್ನು ಪಡೆದುಕೊಳ್ಳುವುದು ಅತೀ ಮುಖ್ಯವಾಗಿದೆ.’ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಹೇಳಿದ್ದಾರೆ.
ಮಾಹೆಯ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲಸಿಕೆಯನ್ನು ನೀಡಲು ನಮಗೆ ಅತ್ಯಂತ ಖುಷಿ ಇದೆ. ವಿದ್ಯಾರ್ಥಿಗಳು ಮಾಹೆಯ ಬೆನ್ನೆಲುಬಾಗಿದ್ದಾರೆ. ಹೀಗಾಗಿ ಅವರ ಆರೋಗ್ಯ ಮತ್ತು ಕ್ಷೇಮವನ್ನು ಖಚಿತ ಪಡಿಸಲು ಅವರಿಗೆ ಲಸಿಕೆಯನ್ನು ನೀಡುವುದು ನಮ್ಮ ಹೊಣೆಗಾರಿಕೆಯಾಗಿದೆ. ಇಡೀ ವಿಶ್ವವನ್ನೇ ಅಲ್ಲೋಲಕಲ್ಲೋಲಗೊಳಿಸಿರುವ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ವ್ಯಾಕ್ಸಿನೇಷನ್ ಹಾಗೂ ಕೋವಿಡ್ ಮಾರ್ಗಸೂಚಿಗಳ ಪಾಲನೆ ಮಾತ್ರ ಎಲ್ಲರ ಸುರಕ್ಷತೆಯನ್ನು ಖಚಿತ ಪಡಿಸುವುದು ಎಂದು ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಮಾಹೆ ಈಗಾಗಲೇ ಪ್ರಾರಂಭಿಸಿದೆ. ಸದ್ಯ ಕ್ಯಾಂಪಸ್‌ನ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಅಲ್ಲದೇ ಮಣಿಪಾಲದ ಸುತ್ತಮುತ್ತ ಇರುವ ಸಂಸ್ಥೆಯ ವಿದ್ಯಾರ್ಥಿಗಳಿಗೂ ಲಸಿಕೆಯನ್ನು ನೀಡಲಾಗುವುದು. ಇವರ ತಮ್ಮ ಸಂಸ್ಥೆಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುವಂತೆ ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಕಿ ಉಳಿದ ವಿದ್ಯಾರ್ಥಿಗಳಿಗೆ ಅವರು ಕ್ಯಾಂಪಸ್‌ಗೆ ಮರಳುತಿದ್ದಂತೆ ಲಸಿಕೆಯನ್ನು ನೀಡಲಾಗುವುದು ಎಂದು ಪ್ರಕಟಣೆ ಹೇಳಿದೆ.