ಕೊರೋನ ವೈರಸ್ ವುಹಾನ್ ಪ್ರಯೋಗಾಲಯದಲ್ಲಿ ಸೋರಿಕೆಯಾಗಿದೆ: ಅಮೆರಿಕ ಪ್ರಯೋಗಾಲಯದ ವರದಿ

Update: 2021-06-08 14:53 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಜೂ. 8: ಕೋವಿಡ್-19 ಸಾಂಕ್ರಾಮಿಕ ಕಾಯಿಲೆಗೆ ಕಾರಣವಾಗುವ ವೈರಸ್ ಚೀನಾದ ವುಹಾನ್ನಲ್ಲಿರುವ ಜೈವಿಕ ಪ್ರಯೋಗಾಲಯವೊಂದರಿಂದ ಸೋರಿಕೆಯಾಗಿದೆ ಎನ್ನುವ ಸಿದ್ಧಾಂತದಲ್ಲಿ ತಿರುಳಿದೆ ಹಾಗೂ ಈ ವಿಷಯದಲ್ಲಿ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಅಮೆರಿಕ ಸರಕಾರದ ನ್ಯಾಶನಲ್ ಲ್ಯಾಬೊರೇಟರಿ ಅಭಿಪ್ರಾಯಪಟ್ಟಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಸೋಮವಾರ ವರದಿ ಮಾಡಿದೆ.

ಈ ವರದಿಯನ್ನು ಕ್ಯಾಲಿಫೋರ್ನಿಯದಲ್ಲಿರುವ ಲಾರೆನ್ಸ್ ಲಿವರ್ಮೋರ್ ನ್ಯಾಶನಲ್ ಲ್ಯಾಬರೇಟರಿಯು 2020 ಮೇ ತಿಂಗಳಲ್ಲಿ ಸಿದ್ಧಪಡಿಸಿತ್ತು. ವರದಿಯನ್ನು ಅಂದಿನಿಂದ ರಹಸ್ಯ ದಾಖಲೆಯಾಗಿಸಲಾಗಿದೆ. ಇದೇ ವರದಿಯ ಆಧಾರದಲ್ಲಿ ಹಿಂದಿನ ಟ್ರಂಪ್ ಆಡಳಿತದ ಕೊನೆಯ ತಿಂಗಳುಗಳಲ್ಲಿ ಸಾಂಕ್ರಾಮಿಕದ ಮೂಲದ ಬಗ್ಗೆ ವಿದೇಶಾಂಗ ಇಲಾಖೆ ತನಿಖೆ ನಡೆಸಿತ್ತು ಎಂದು ಪತ್ರಿಕೆ ಹೇಳಿದೆ.

ಲಾರೆನ್ಸ್ ಲಿವರ್ಮೋರ್ ನ್ಯಾಶನಲ್ ಲ್ಯಾಬರೇಟರಿಯು ಕೋವಿಡ್-19 ವೈರಸ್ ನ ವಂಶವಾಹಿ ವಿಶ್ಲೇಷಣೆಯನ್ನು ನಡೆಸಿತ್ತು.

ವಾಲ್ ಸ್ಟ್ರೀಟ್ ಜರ್ನಲ್ ನ ವರದಿಗೆ ಪ್ರತಿಕ್ರಿಯಿಸಲು ಪ್ರಯೋಗಾಲಯವು ನಿರಾಕರಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News