ಯಡಮೊಗೆ ಕೊಲೆ ಪ್ರಕರಣ: ಸಿಬಿಐಗೆ ಒಪ್ಪಿಸುವಂತೆ ದಸಂಸ ಆಗ್ರಹ
ಕುಂದಾಪುರ, ಜೂ.8: ಯಡಮೊಗ್ಗೆ ಉದಯ ಗಾಣಿಗರ ಕೊಲೆ ಪ್ರಕರಣದ ಆರೋಪಿಗಳು ಆಡಳಿತರೂಢ ರಾಜಕೀಯ ಪಕ್ಷದ ಹಿನ್ನೆಲೆ ಉಳ್ಳವ ರಾಗಿದ್ದು ರಾಜಕೀಯ ಪ್ರಭಾವ ಬಳಸಿ ತನಿಖೆಯ ದಿಕ್ಕು ತಪ್ಪಿಸುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದೆ. ಆದುದರಿಂದ ಈ ಪ್ರಕರಣವನ್ನು ಉನ್ನತ ಮಟ್ಟದ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸು ದೇವ ಮುದೂರು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಆಡಳಿತ ರೂಡ ಪಕ್ಷದ ಕೆಲವು ಮುಖಂಡರುಗಳೆ ಆರೋಪಿಗಳ ಪರ ರಕ್ಷಣೆಗೆ ನಿಂತಿರುವುದು ದುರದೃಷ್ಟಕರ. ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿ ಗಳಿಗೂ ಕಠಿಣ ಶಿಕ್ಷೆಯಾಗಿ ಉದಯ ಗಾಣಿಗರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ವಾಸು ದೇವ ಮುದೂರು ವಕೀಲ,ಮಂಜುನಾಥ ಗಿಳಿಯಾರು, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನ ಮನೆ,ಬೈಂದೂರು ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್, ಬೈಂದೂರು ಸಂಚಾಲಕ ಮಂಜುನಾಥ ನಾಗೂರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ